ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ಕ್ರಿಕೆಟ್ನ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಅವರನ್ನು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ನಾಯಕತ್ವದಿಂದಲೂ ಕೆಳಗಿಳಿಸಲು ಬಿಸಿಸಿಐ ಬೋರ್ಡ್ ಮತ್ತು ಸೆಲೆಕ್ಷನ್ ಕಮಿಟಿ ನಿರ್ಧರಿಸಿದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿಗೆ ಸದ್ಯ ಅಗ್ನಿ ಪರೀಕ್ಷೆ ಎದುರಾಗಿದ್ದು, ಅವರು ಟಿ20 ವಿಶ್ವಕಪ್ನಲ್ಲಿ ಗೆದ್ದು ತೋರಿಸಲೇಬೇಕಿದೆ. ಒಂದು ವೇಳೆ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದರೂ ಅದರು ಕೊಹ್ಲಿ ಪಾಲಿಗೆ ನಷ್ಟವಾಗಿ ಪರಿಣಮಿಸಲಿದೆ. ಕಪ್ ಗೆಲ್ಲುವಲ್ಲಿ ವಿರಾಟ್ ವಿಫಲರಾದರೆ ಅವರನ್ನು ಒನ್ ಡೇ ಇಂಟರ್ನ್ಯಾಷನಲ್ನಿಂದಲೂ ಕೆಳಗಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
PublicNext
16/09/2021 08:56 pm