ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯ ದ್ವಿತೀಯಾರ್ಧದ ಪಂದ್ಯಗಳು ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದೆ. ಎಲ್ಲ ತಂಡದ ಆಟಗಾರರು ಮೈದಾನಕ್ಕಿಳಿದು ಸಖತ್ ಆಗಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಆರ್ಸಿಬಿ ತಂಡದ ಹರ್ಷಲ್ ಪಟೇಲ್ ನೇತೃತ್ವದ ಎ ತಂಡ ಹಾಗೂ ದೇವದತ್ ಪಡಿಕ್ಕಲ್ ನೇತೃತ್ವದ ಬಿ ತಂಡಗಳ ನಡುವೆ ಅಭ್ಯಾಸ ಪಂದ್ಯ ಆಯೋಜನೆಗೊಂಡಿತ್ತು. ಎ ತಂಡದಲ್ಲಿದ್ದ ಎಬಿಡಿ ಶತಕದ ಆರ್ಭಟದಿಂದ ನಿಗದಿತ 20 ಓವರ್ಗಳಲ್ಲಿ 212ರನ್ಗಳಿಕೆ ಮಾಡಿತು.
ಇದರಲ್ಲಿ ಎಬಿಡಿ ಕೇವಲ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್ ಸಹಾಯದಿಂದ 104 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಜರುದ್ದೀನ್ 43 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 66 ರನ್ಗಳಿಕೆ ಮಾಡಿದರು. 213ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಪಡಿಕ್ಕಲ್ ನೇತೃತ್ವದ ಬಿ ತಂಡ ಕೊನೆ ಓವರ್ನಲ್ಲಿ ಗೆಲುವು ದಾಖಲು ಮಾಡಿದೆ. ಬಿ ತಂಡದಲ್ಲಿದ್ದ ಕೆ.ಎಸ್.ಭರತ್ 95 ರನ್ಗಳಿಕೆ ಮಾಡಿದ್ರೆ, ಕ್ಯಾಪ್ಟನ್ ದೇವದತ್ ಪಡಿಕ್ಕಲ್ 36 ರನ್ಗಳಿಸಿದರು.
PublicNext
15/09/2021 06:39 pm