ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಬ್ರಿಟನ್‌ನ 18 ವರ್ಷದ ಯುವ ತಾರೆ ಎಮ್ಮಾ ರಾಡುಕಾನು ಗೆದ್ದು ನೂತನ ಇತಿಹಾಸ ಸೃಷ್ಟಿಸಿದ್ದಾರೆ.
ಟೆನಿಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆಯನ್ನು ಎಮ್ಮಾ ರಾಡುಕಾನು ಮಾಡಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಎಮ್ಮಾ ರಾಡುಕಾನು ಅವರು ಎದುರಾಳಿ ಕೆನಡಾದ ಲೇಲಾ ಫರ್ನಾಂಡೆಜ್ ವಿರುದ್ಧ 6-4, 6-3ರ ನೇರ ಅಂತರದಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.
150ನೇ ರ‍್ಯಾಂಕ್ ಆಟಗಾರ್ತಿ ಎಮ್ಮಾ, ಟೂರ್ನಿಯಲ್ಲಿ ಒಂದೇ ಒಂದು ಸೆಟ್ ಬಿಟ್ಟುಕೊಡದೇ ಗ್ರ್ಯಾನ್ ಸ್ಲಾಮ್ ಕಿರೀಟ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು. 1968ರ ಬಳಿಕ ಅಮೆರಿಕನ್ ಓಪನ್ ಗೆದ್ದ ಬ್ರಿಟನ್ ಆಟಗಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
PublicNext
12/09/2021 11:06 am