ನವದೆಹಲಿ: ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ಕೆಲ ವಾರಗಳು ಮಾತ್ರ ಬಾಕಿ ಉಳಿದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯದಲ್ಲಿ ಟೂರ್ನಿ ಅಕ್ಟೋಬರ್ 17ರಂದು ಶುರುವಾಗಲಿದೆ. ಈವರೆಗೂ ಬಿಸಿಸಿಐ ತಂಡವನ್ನು ಪ್ರಕಟಿಸಿಲ್ಲ. ಈ ಮಧ್ಯೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು, ಟೀಂ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ.
ಸ್ಪೋರ್ಟ್ಸ್ ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್, "ಕೃಣಾಲ್ ಪಾಂಡ್ಯ ಉತ್ತಮ ಆಲ್‌ರೌಂಡರ್. ಅತ್ಯಂತ ಅನುಭವಿ ಆಟಗಾರ ಕೂಡ. ಐಪಿಎಲ್‌ನ ಹಿಂದಿನ ಟೂರ್ನಿಗಳಲ್ಲಿ ಅವರ ಪ್ರದರ್ಶನ ಉತ್ತಮವಾಗಿದೆ. ಜೊತೆಗೆ ಎಡಗೈ ಆಟಗಾರ ಆಗಿರುವ ಕಾರಣ ತಂಡಕ್ಕೆ ಲಾಭವಾಗಲಿದೆ" ಎಂದು ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅವರು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಹೆಸರಿಸಿದ್ದಾರೆ. ಕೆಎಲ್ ರಾಹುಲ್ ಕಾಯ್ದಿರಿಸಲ್ಪಟ್ಟ ಓಪನರ್ ಆಗಿದ್ದು, ಕಾಯ್ದಿರಿಸಲ್ಪಟ್ಟ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಆದರೆ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಸುನಿಲ್ ಗವಾಸ್ಕರ್ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
ಸುನಿಲ್ ಗವಾಸ್ಕರ್ ಆಯ್ಕೆಯ ಭಾರತದ ಟಿ20 ವಿಶ್ವಕಪ್ ತಂಡ ಹೀಗಿದೆ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ (ಫಿಟ್ನೆಸ್ ಪರಿಗಣಿಸಿ), ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಶಾರ್ದುಲ್ ಠಾಕೂರ್ ಮತ್ತು ಯುಜ್ವೇಂದ್ರ ಚಹಲ್.
PublicNext
08/09/2021 01:45 pm