ಇಸ್ಲಾಮಾಬಾದ್: ಟಿ20 ವಿಶ್ವಕಪ್‌ಗೂ ಮುನ್ನವೇ ಅಚ್ಚರಿಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ ಉಲ್-ಹಕ್ ಹಾಗೂ ಬೌಲಿಂಗ್ ಕೋಚ್ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದ್ದು, ಪಾಕ್‌ನ ಮಾಜಿ ಕ್ರಿಕೆಟಿಗರಾದ ಸಾಕ್ಲಿನ್ ಮುಸ್ತಾಕ್ ಹಾಗೂ ಅಬ್ದುಲ್ ರಜಾಕ್ ಮಧ್ಯಂತರ ಕೋಚ್‌ಗಳಾಗಿರಲಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಸೆಪ್ಟೆಂಬರ್ 13ರಂದು ಮಂಡಳಿಗೆ ರಮೀಜ್ ರಾಜ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದೆ.
ಈ ಹಿಂದೆ ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಪಾಕ್‌ತಂಡಕ್ಕೆ ಮಿಸ್ಬಾ ಹಾಗೂ ವಾಕರ್ ಅತ್ಯುತ್ತಮ ಕೋಚ್‌ಗಳೆಂದು ತಮಗೆ ಅನ್ನಿಸುವುದಿಲ್ಲ ಎಂದು ಹೇಳಿದ್ದರು. ಸೋಮವಾರ ಪ್ರಕಟಗೊಂಡ ವಿಶ್ವಕಪ್ ತಂಡದ ಆಯ್ಕೆಯಲ್ಲಿಯೂ ರಮೀಜ್ ರಾಜ ಅವರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ.
PublicNext
07/09/2021 12:23 pm