ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿದೆ. ಯುವ ಆಟಗಾರರಾದ ಶಾರ್ದೂಲ್ ಠಾಕೂರ್ ಮತ್ತು ರಿಷಬ್ ಪಂತ್ ಸಮಯೋಚಿತ ಅರ್ಧಶತಕದ ಸಹಾಯದಿಂದ ಭಾರತವು 466 ರನ್ಗಳಿಗೆ ಆಲೌಟ್ ಆಗಿದೆ.
ನಾಲ್ಕನೇ ದಿನವಾದ ಇಂದು ಭಾರತ 312 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ತಂಡಕ್ಕೆ ಶಾರ್ದೂಲ್ ಮತ್ತು ಪಂತ್ ಜೋಡಿ ಕೊಂಚ ಮುನ್ನಡೆ ತಂದು ಕೊಟ್ಟರು. ಚಹಾ ವಿರಾಮಕ್ಕೂ ಮುನ್ನ ಭಾರತ 8 ವಿಕೆಟ್ ಕಳೆದುಕೊಂಡು 445 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಮುನ್ನಡೆಸಿದ್ದ ಶಾರ್ದೂಲ್ ಠಾಕೂರ್ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಸಿಡಿಸಿ ತಂಡಕ್ಕೆ ತಮ್ಮದೆಯಾದ ಕೊಡುಗೆ ನೀಡಿದರು.
ಶಾರ್ದೂಲ್ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರೆ, ರಿಷಭ್ ಪಂತ್ 105 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅರ್ಧಶತಕ ಪೂರೈಸಿದರು. ಪ್ರಸ್ತುತ ಟೀಂ ಇಂಡಿಯಾ 10 ವಿಕೆಟ್ ಕಳೆದುಕೊಂಡು 466 ರನ್ಗಳಿಸಿದೆ. ಈ ಮೂಲಕ 367 ರನ್ಗಳ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಬೇಕಾದರೆ 368 ರನ್ಗಳಿಸಬೇಕಾಗಿದೆ.
PublicNext
05/09/2021 09:59 pm