ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಇಂದು ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಜಿದ್ದು, P4 ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್ ರಾಜ್ ಬೆಳ್ಳಿಗೆ ಮುತ್ತಿಕ್ಕಿದ್ದಾರೆ. 19 ವರ್ಷ ಪ್ರಾಯದ ಮನೀಶ್ ವಿಶ್ವ ದಾಖಲೆಯ 218.2 ಪಾಯಿಂಟ್ನೊಂದಿಗೆ ಚಿನ್ನದ ಪದಕ ಗೆದ್ದರು. ಸಿಂಗ್ ರಾಜ್ 216.7 ಪಾಯಿಂಟ್ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ತಮ್ಮದಾಗಿಸಿದರು.
ಪ್ಯಾರಾಲಿಂಪಿಕ್ಸ್ 2020 ರಲ್ಲಿ ಇದು ಸಿಂಗ್ ರಾಜ್ ಗೆ ಸಿಗುತ್ತಿರುವ ಎರಡನೇ ಪದಕವಾಗಿದೆ. ಭಾರತೀಯರಿಗೆ ಪ್ರಬಲ ಪೈಪೋಟಿ ನೀಡಿದ್ದ ರಷ್ಯಾದ ಶೂಟರ್ ಸೆರ್ಗೆ, 196.8 ಅಂಕ ಗಳಿಸುವುದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳಿವೆ.
ಇತ್ತ ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
PublicNext
04/09/2021 10:37 am