ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವನಿ ಲೇಖಾರಗೆ ಮತ್ತೊಂದು ಪದಕ: ಅವಳಿ ಪದಕಗಳಿಗೆ ಕೊರಳೊಡ್ಡಿದ ಮೊದಲ ಭಾರತೀಯ ಕ್ರೀಡಾಪಟು

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಈ ಮುನ್ನ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರ ಇಂದು ಮತ್ತೊಂದು ಪದಕಕ್ಕೆ ಕೊರೊಳೊಡ್ಡಿದ್ದಾರೆ. ಆ ಮೂಲಕ ಪ್ಯಾರಾ ಗೇಮ್ಸ್ ನಲ್ಲಿ ಅವಳಿ ಪದಕಗಳಿಗೆ ಕೊರಳೊಡ್ಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರಾಗಿದ್ದಾರೆ.

ಇಂದು ನಡೆದ ಮಹಿಳೆಯರ 50 ಮೀಟರ್ ರೈಫಲ್ 3ಪಿ ಎಸ್ಎಚ್1 ಫೈನಲ್ ಸ್ಪರ್ಧೆಯಲ್ಲಿ ಜೈಪುರದ 19 ವರ್ಷ ವಯಸ್ಸಿನ ಅವನಿ, ಕಂಚಿನ ಪದಕ ಗೆದ್ದರು. ರಜತ ಪದಕಕ್ಕಾಗಿ ಆಡಿದಾಗ, ಚೀನಾದ ಜಾಂಗ್ 10.3 ಅಂಕ ಗಳಿಸಿದರೆ, ಅವನಿ, 10.2 ಅಂಕಗಳನ್ನು ಗಳಿಸಿದರು. ನಂತರ ಆಡಿದ ಕಂಚಿನ ಪದಕದ ಸ್ಪರ್ಧೆಯಲ್ಲಿ ಯುಕ್ರೇನಿನ ಶೆಟ್ನಿಕ್ 9.9 ಅಂಕ ಗಳಿಸಿದರೆ, ಅವನಿ 10.5 ಅಂಕಗಳನ್ನು ಗಳಿಸಿ ಪದಕವನ್ನು ಗೆದ್ದರು.

ಇದೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ಈವೆಂಟಿನಲ್ಲಿ ಅವನಿ ಲೇಖಾರ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದೀಗ ಮತ್ತೊಂದು ಪದಕ ಗೆದ್ದು, ಒಂದೇ ಕ್ರೀಡಾಕೂಟದಲ್ಲಿ ಬೇರೆ ಬೇರೆ ಈವೆಂಟುಗಳಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಅವನಿ ಅವರಿಗೆ ಕಂಚಿನ ಪದಕ ಪ್ರದಾನ ಮಾಡುತ್ತಿರುವ ವಿಡಿಯೋವನ್ನು ಭಾರತದ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

03/09/2021 06:28 pm

Cinque Terre

41.1 K

Cinque Terre

0

ಸಂಬಂಧಿತ ಸುದ್ದಿ