ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ IND vs ENG ನಾಲ್ಕನೇ ಟೆಸ್ಟ್ ಪಂದ್ಯ ಆರಂಭ : ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಲಂಡನ್: ಮೂರನೇ ಟೆಸ್ಟ್ ನಲ್ಲಿ 78 ರನ್ ಗೆ ಕುಸಿದು ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾಕ್ಕೆ ಇಂದಿನ ಪಂದ್ಯ ಮುಖ್ಯವಾಗಿದೆ. ಸದ್ಯ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಸರಣಿ ಮುನ್ನಡೆಗೆ ಉಭಯ ತಂಡಗಳು ಸೆಣಸಾಡುತ್ತಿದೆ.

ಈ ಪಂದ್ಯದಲ್ಲಿ ಇಂಗ್ಲೆಂಡ್ ಎರಡು ಬದಲಾವಣೆ ಮಾಡಿಕೊಂಡಿದೆ. ಜೋಸ್ ಬಟ್ಲರ್ ಬದಲಿಗೆ ಓಲಿ ಪೋಪ್ ಮತ್ತು ಸ್ಯಾಮ್ ಕರ್ರನ್ ಬದಲಿಗೆ ಕ್ರಿಸ್ ವೋಕ್ಸ್ ತಂಡಕ್ಕೆ ಆಗಮಿಸಿದ್ದಾರೆ.

ಭಾರತ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಂಡಕ್ಕೆ ಎಂಟ್ರಿಯಾಗಿದ್ದಾರೆ. ನಿರೀಕ್ಷೆ ಮೂಡಿಸಿದ್ದ ಅಶ್ವಿನ್ ಗಿಲ್ಲ ಅವಕಾಶವಿಲ್ಲ.

ತಂಡಗಳು:

ಭಾರತ: ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾ), ಜಾನಿ ಬೈರ್ಸ್ಟೊ (ವಿ.ಕೀ), ಒಲ್ಲಿ ಪೋಪ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಒಲ್ಲಿ ರಾಬಿನ್ಸನ್, , ಜೇಮ್ಸ್ ಆಂಡರ್ಸನ್, ಕ್ರೆಗ್ ಓವರ್ಟನ್

Edited By : Nirmala Aralikatti
PublicNext

PublicNext

02/09/2021 03:54 pm

Cinque Terre

20.28 K

Cinque Terre

0

ಸಂಬಂಧಿತ ಸುದ್ದಿ