ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾವನಾತ್ಮಕ ಸಂದೇಶದೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಡೇಲ್​ ಸ್ಟೈನ್​ ನಿವೃತ್ತಿ

ನವದೆಹಲಿ: ದಕ್ಷಿಣ ಆಫ್ರಿಕಾ ಕಂಡ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗರ ಪೈಕಿ ಒಬ್ಬರಾದ ಡೇಲ್ ಸ್ಟೇನ್ ಮಂಗಳವಾರ ( ಆಗಸ್ಟ್ 31 ) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

38 ವರ್ಷದ ಡೇಲ್ ಸ್ಟೇನ್ 2004ರ ಡಿಸೆಂಬರ್ 17ರಂದು ಆರಂಭವಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಮೊದಲ ಸರಣಿಯಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದ ಡೇಲ್ ಸ್ಟೇನ್ ತಂಡದಲ್ಲಿ ಹೆಚ್ಚು ದಿನಗಳ ಕಾಲ ಸ್ಥಾನ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದ್ದರು.

ಈಗಾಗಲೇ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಅವರು ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಟ್ವೀಟ್ ಮೂಲಕ ಡೇಲ್ ಸ್ಟೇನ್ ಹಂಚಿಕೊಂಡಿದ್ದಾರೆ.

"ಕಳೆದ 20 ವರ್ಷಗಳಿಂದ ತರಬೇತಿ, ಪಂದ್ಯಗಳು, ಪ್ರಯಾಣ, ಗೆಲುವು- ಸೋಲು, ಜೆಟ್ ಲ್ಯಾಗ್, ಎಂಜಾಯ್​ಮೆಂಟ್​ ಹಾಗೂ ಸಹೋಹದರತ್ವ ಹೀಗೆ ಹೇಳಲು ಸಾಕಷ್ಟು ಸುಮದುರ ನೆನಪುಗಳಿವೆ. ಸಾಕಷ್ಟು ಜನರಿಗೆ ಧನ್ಯವಾದ ಹೇಳಬೇಕಿದೆ. ಆದ್ದರಿಂದ ಇದನ್ನು ಪರಿಣಿತರಿಗೆ ಬಿಟ್ಟಿದ್ದೇನೆ. ಈ ದಿನ ನಾನು ಪ್ರೀತಿಸಿದ ಆಟಕ್ಕೆ ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ. ಇದು ಕಹಿ ಸತ್ಯವಾಗಿದೆ, ಆದರೆ ಒಪ್ಪಿಕೊಳ್ಳಲೇಬೇಕು. ಈ ನನ್ನ ಕ್ರಿಕೆಟ್ ಪಯಣದಲ್ಲಿ ನನಗೆ ಬೆಂಬಲಿಸಿದ ಕುಟುಂಬ, ತಂಡದ ಸಹ ಆಟಗಾರರು, ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಧನ್ಯವಾದ" ಎಂದು ಭಾವನಾತ್ಮಕ ಪತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ತಮ್ಮ ವೇಗದ ಸ್ವಿಂಗ್ ಬೌಲಿಂಗ್‌ನಿಂದ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿದ್ದ ಡೇಲ್ ಸ್ಟೇನ್ ಒಟ್ಟು 93 ಟೆಸ್ಟ್ ಪಂದ್ಯಗಳನ್ನಾಡಿದ್ದು 439 ವಿಕೆಟ್‍ಗಳನ್ನು ಪಡೆದಿದ್ದಾರೆ. ಡೇಲ್ ಸ್ಟೈನ್ ಅವರು 125 ಏಕದಿನ ಪಂದ್ಯವನ್ನಾಡಿದ್ದು, 196 ವಿಕೆಟ್ ಪಡೆದಿದ್ದಾರೆ. ಇನ್ನು 47 ಟಿ20 ಪಂದ್ಯಗಳಿಂದ 64 ವಿಕೆಟ್ ಪಡೆದಿದ್ದಾರೆ.

Edited By : Vijay Kumar
PublicNext

PublicNext

31/08/2021 06:41 pm

Cinque Terre

27.07 K

Cinque Terre

0

ಸಂಬಂಧಿತ ಸುದ್ದಿ