ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗವಾಸ್ಕರ್ ಸೇರಿ ಕ್ರಿಕೆಟ್ ದಿಗ್ಗಜರ ಕೋಚ್ ವಾಸು ಪರಂಜಪೆ ನಿಧನ

ಮುಂಬೈ: ಮುಂಬೈನ ಮಾಜಿ ಕ್ರಿಕೆಟಿಗ ಹಾಗೂ ಪ್ರಸಿದ್ಧ ಕೋಚ್ ವಾಸು ಪರಾಂಜಪೆ (82) ಇಂದು (ಆಗಸ್ಟ್ 30) ನಿಧನರಾದರು.

ವಾಸು ಅವರು 1956 ಮತ್ತು 1970ರ ನಡುವೆ ಮುಂಬೈ ಮತ್ತು ಬರೋಡಾ ಪರವಾಗಿ 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರು 23.78 ಸರಾಸರಿಯಲ್ಲಿ 785 ರನ್ ಗಳಿಸಿದ್ದರು. ಹಾಗೆಯೇ ಒಂಬತ್ತು ವಿಕೆಟ್ ಪಡೆದಿದ್ದರು. ವಾಸು ಪರಂಜಪೆ ಅವರು 21 ನವೆಂಬರ್ 1938 ರಂದು ಗುಜರಾತ್‌ನಲ್ಲಿ ಜನಿಸಿದರು. ಜತಿನ್ ಪರಂಜಪೆ ಅವರ ಮಗ ಭಾರತಕ್ಕಾಗಿ ಆಡಿದ್ದಾರೆ. ಇದರೊಂದಿಗೆ ಜತಿನ್ ಕೂಡ ರಾಷ್ಟ್ರೀಯ ಆಯ್ಕೆಗಾರರಾಗಿದ್ದಾರೆ.

ಆಟಗಾರನಾಗಿ ನಿವೃತ್ತರಾದ ನಂತರ, ವಾಸು ಪರಂಜಪೆ ತರಬೇತುದಾರರಾದರು ಮತ್ತು ಅನೇಕ ಕ್ರಿಕೆಟಿಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಹಾಯ ಮಾಡಿದರು. ಇವರುಗಳಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮುಂತಾದ ಹೆಸರುಗಳು ಸೇರಿವೆ. ವಾಸು ಹಲವು ತಂಡಗಳಿಗೆ ಕೋಚ್ ಆಗಿದ್ದರು. ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೋಚ್ ಕೂಡ ಆಗಿದ್ದರು. ಅವರ ನಿಧನಕ್ಕೆ ರವಿಶಾಸ್ತ್ರಿ, ವಿನೋದ್ ಕಾಂಬ್ಳಿ ಸೇರಿದಂತೆ ಅನೇಕ ಹಿರಿಯರು ಸಂತಾಪ ಸೂಚಿಸಿದ್ದಾರೆ.

Edited By : Vijay Kumar
PublicNext

PublicNext

31/08/2021 03:30 pm

Cinque Terre

23.77 K

Cinque Terre

0

ಸಂಬಂಧಿತ ಸುದ್ದಿ