ನವದೆಹಲಿ: ಟೋಕಿಯೊ ಪ್ಯಾರಾಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆದು ಭಾರತಕ್ಕೆ ಮತ್ತೊಂದು ಚಿನ್ನವನ್ನು ಪಡೆಯುವ ಮೂಲಕವಾಗಿ ಸುಮಿತ್ ದಾಖಲೆ ಬರೆದಿದ್ದಾರೆ.
ಸುಮಿತ್ ಆಂಟಿಲ್ ಪುರುಷರ F64 ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಇಂದು ವಿಶ್ವ ದಾಖಲೆ ಮುರಿದು ಭಾರತಕ್ಕೆ 2ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಈ ಪ್ಯಾರಾ ಕ್ರೀಡಾಪಟುವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಇಡೀ ದೇಶ ನಿಮ್ಮ ಪ್ರದರ್ಶನದಿಂದ ಹೆಮ್ಮೆ ಪಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಫೋನ್ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
PublicNext
30/08/2021 08:33 pm