ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕ ಬೇಟೆ ಮುಂದುವರೆದಿದೆ. ಪುರುಷ ಜಾವೆಲಿನ್ ಥ್ರೋ ವಿಭಾಗದಲ್ಲಿ ಅಥ್ಲೀಟ್ ಸುಮಿತ್ ಅಂತಿಲ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮುನ್ನ ಶೂಟಿಂಗ್ನಲ್ಲಿ 19 ವರ್ಷದ ಅವನಿ ಲೇಖರ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಳಿಕ ಡಿಸ್ಕರ್ ಥ್ರೋನಲ್ಲಿ ಯೋಗಿಶ್ ಬೆಳ್ಳಿ ಗೆದ್ದ ಸಾಧನೆ ಮಾಡಿದರು. ಈ ಬೆನ್ನಲ್ಲೆ ಜಾವಲೀನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ.
ಜಾವಲೀನ್ ಥ್ರೋ ಪುರುಷರ ವಿಭಾಗದ ಎಫ್46 ಫೈನಲ್ನಲ್ಲಿ ಭಾರತದ ದೇವೇಂದ್ರ ಬೆಳ್ಳಿ ಪದಕಕ್ಕೆ ಮುತ್ತಿಟ್ಟರೆ, ಸುಂದರ್ ಗುರ್ಜರ್ ಸಿಂಗ್ ಕಂಚಿನ ಪದಕಕ್ಕೆ ಗೆಲ್ಲುವಲ್ಲಿ ಯಶಸ್ವಿಯಾದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಸುತ್ತಿನಲ್ಲಿ ಲಂಕಾದ ದಿನೇಶ್ ಪ್ರಿಯನ್, ದೇವೆಂದ್ರ, ಸುಂದರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸುಮಿತ್ ಅಂತಿಲ್ 68.55 ಮೀಟರ್ ದೂರಕ್ಕೆ ಥ್ರೋ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ಲ್ಲಿ ಭಾರತಕ್ಕೆ 7 ಪದಕಗಳು ಬಂದಿವೆ. 2 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕ ಸೇರಿದೆ.
PublicNext
30/08/2021 05:27 pm