ಟೀಂ ಇಂಡಿಯಾದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಪರ ಮಾಡಿದ್ದ ಬಿನ್ನಿ, “ನಾನು ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಿನ್ನಿ ಅವರು ಭಾರತ ಪರ ಆರು ಟೆಸ್ಟ್ ಪಂದ್ಯ, 14 ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಿದ್ದಾರೆ. 37 ವರ್ಷದ ಬಿನ್ನಿ ಬಿಸಿಸಿಐಗೆ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಹಕರಿಸಿದ ಕರ್ನಾಟಕ ಕ್ರಿಕೆಟ್ ಗೆ ಧನ್ಯವಾದ ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಇವರು 194 ರನ್ ಗಳಿಸಿದ್ದು 3 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 230 ರನ್ ಗಳಿಸಿದ್ದು 20 ವಿಕೆಟ್ ಕಿತ್ತಿದ್ದಾರೆ. ಅಂತೆಯೆ ಟಿ-20 ಕ್ರಿಕೆಟ್ ನಲ್ಲಿ 24 ರನ್ ಗಳಿಸಿದ್ದು 1 ವಿಕೆಟ್ ಪಡೆದಿದ್ದಾರೆ.
2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡರು. 2014ರಲ್ಲಿ ಬಾಂಗ್ಲಾದೇಶದ ವಿರುದ್ಧ 9 ಕ್ಕೆ 6 ವಿಕೆಟ್ ಪಡೆದಿದ್ದರು.
ಬಿನ್ನಿ 95 ಪ್ರಥಮ ದರ್ಜೆ, 100 ಲಿಸ್ಟ್ ಎ ಮತ್ತು 150 ಟಿ20 ಗಳನ್ನಾಡಿದ್ದು, 4796 ರನ್ ಮತ್ತು 148 ವಿಕೆಟ್ ಗಳನ್ನು ಹೊಂದಿದ್ದಾರೆ. ಲಿಸ್ಟ್ ಎ ಕ್ರಿಕೆಟ್ ನಲ್ಲಿ, ಬಿನ್ನಿ 1788 ರನ್ ಗಳಿಸಿದ್ದಾರೆ.
PublicNext
30/08/2021 02:30 pm