ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಿ ಗೆದ್ದ ಭವೀನಾಗೆ ಕ್ರೆಕೆಟ್ ದೇವರನ್ನು ಕಾಣುವ ಆಸೆ…

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಟೇಬಲ್ ಟೆನ್ನಿಸ್ ಆಟದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಭವೀನಾ ಬೇನ್ ಪಟೇಲ್ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಭವೀನಾ, ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುವಂತಹ ಟೇಬಲ್ ಟೆನ್ನಿಸ್ ಆಟದಲ್ಲಿ ಪೂರ್ಣ ತಲ್ಲೀನತೆಯಿಂದ ಭಾಗವಹಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ತಾವು ರೂಢಿಸಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ಕೋಚ್ ನಿಕುಲ್ ಪಟೇಲ್ ಅವರು ಟೋಕಿಯೋಗೆ ಬಾರದಿದ್ದರೂ, ವಿಡಿಯೋ ಕಾಲ್ ನ ಮೂಲಕ ತಮಗೆ ಪಂದ್ಯಾವಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರೆಂದು ಸ್ಮರಿಸಿದ್ದಾರೆ.

ನಿಮ್ಮ ಪದಕವನ್ನು ಯಾರಿಗೆ ತೋರಿಸಿ ಸೆಲೆಬ್ರೇಟ್ ಮಾಡಲಿಚ್ಛಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭವೀನಾ, “ನನಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರೇರಣಾದಾಯಕವಾಗಿದ್ದು, ಅವರನ್ನು ಒಮ್ಮೆ ಖುದ್ದು ಮಾತನಾಡಿಸಲಿಚ್ಛಿಸುತ್ತೇನೆ. ಅವರಿಂದ ಇನ್ನಷ್ಟು ಪ್ರೋತ್ಸಾಹದಾಯಕ ಮಾತುಗಳನ್ನು ಕೇಳಲಿಚ್ಛಿಸುತ್ತೇನೆ” ಎಂದಿದ್ದಾರೆ.

Edited By : Nirmala Aralikatti
PublicNext

PublicNext

29/08/2021 10:29 pm

Cinque Terre

28.82 K

Cinque Terre

0

ಸಂಬಂಧಿತ ಸುದ್ದಿ