ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರಿದಿದೆ. ಟೇಬಲ್ ಟೆನಿಸ್ ನಲ್ಲಿ ಭವಿನಾ ಪಟೇಲ್ ಬೆಳ್ಳಿ ಗೆದ್ದ ಬೆನ್ನಲ್ಲೇ ಹೈಜಂಪ್ ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿಶಾದ್ ಕುಮಾರ್ ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿಯಾಗಿದ್ದೀರಿ. ದೇಶದ ಕೀರ್ತಿ ಪತಾಕೆ ಹಾರಿಸಿದ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದಿದ್ದಾರೆ. ಪ್ರಧಾನಿ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಿಶಾದ್ ಕುಮಾರ್ ಧನ್ಯವಾದ ಹೇಳಿದ್ದಾರೆ. ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಹೈಜಂಪ್ ಅಂತಿಮ ಸುತ್ತಿನಲ್ಲಿ ನಿಶಾದ್ ಕುಮಾರ್ 2.06 ಮೀಟರ್ ಎತ್ತರಕ್ಕೆ ಹಾರಿ ತಮ್ಮದೇ ಏಷ್ಯನ್ ಗೇಮ್ಸ್ ದಾಖಲೆ ಸರಿಗಟ್ಟಿದರು. ಅಮೆರಿಕದ ರೋಡ್ರಿಕ್ ಟೌನ್ಸೆಡ್ 2.15 ಮೀಟರ್ ಎತ್ತರ ಹಾರೋ ಮೂಲಕ ಚಿನ್ನದ ಪದಕ ಗೆದ್ದುಕೊಂಡರು.
ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡರೆ ಮತ್ತೊರ್ವ ಭಾರತೀಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ರಾಮ್ ಪಾಲ್ 1.94 ಮೀಟರ್ ಎಚ್ಚರ ಹಾರೋ ಮೂಲಕ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಟೋಕಿಯೋ ಪಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತೀಯರು:
1) ಭಾವಿನಾ ಪಟೇಲ್, ಟೇಬಲ್ ಟೆನಿಸ್ – ಬೆಳ್ಳಿ ಪದಕ
2) ನಿಶದ್ ಕುಮಾರ್, ಹೈಜಂಪ್ – ಬೆಳ್ಳಿ ಪದಕ
3) ವಿನೋದ್ ಕುಮಾರ್, ಡಿಸ್ಕಸ್ ಥ್ರೋ – ಕಂಚಿನ ಪದಕ
PublicNext
29/08/2021 07:41 pm