ಅಹಮದಾಬಾದ್ : ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದಡಿ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್ ಪುರಸ್ಕಾರ್ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಗುಜರಾತ್ ನ ವಡ್ ನಗರ್ ಭಾವೀನಾ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು. ಸ್ಥೈರ್ಯ ಕಳೆದುಕೊಳ್ಳದ ಇವರು ಪದವಿ ವ್ಯಾಸಂಗ ಸಮಯದಲ್ಲಿ ಟೇಬಲ್ ಟೆನಿಸ್ ಆಡಲು ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಐದು ಚಿನ್ನದ ಪದಕ ಹಾಗೂ 13 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ವಿಶೇಷ ಎಂದರೆ ಭುವೀನಾ ಆಡಿದ ಮೊದಲ ಪ್ಯಾರಾಲಿಂಪಿಕ್ಸ್ ನಲ್ಲಿಯೇ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
PublicNext
29/08/2021 04:10 pm