ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾರಾಲಿಂಪಿಕ್ ಗೇಮ್ಸ್ : ಟಿಟಿಯಲ್ಲಿ ಫೈನಲ್ ತಲುಪಿದ ಭವಿನಾ ಪಟೇಲ್

ಟೋಕಿಯೋ : ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾ ಪಟೇಲ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯರಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭವಿನಾ ಪಟೇಲ್ ಮಹಿಳೆಯರ ವೈಯಕ್ತಿಯ ಸಿ4 ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದ ಭವಿತಾ ಇದೀಗ ಇಂದು(ಆ.28) ಮುಂಜಾನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಹಾಗೂ 2016ರ ರಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಚೀನಾದ ಝಾಂಗ್ ಮಿಯಾ ಅವರನ್ನು 3-2 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿ ನೂತನ ಇತಿಹಾಸ ರಚಿಸಿದ್ದಾರೆ.

ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಟೇಬಲ್ ಟೆನಿಸ್ ಪಟು ಎಂಬ ಕೀರ್ತಿಗೂ 34 ವರ್ಷದ ಭವಿನಾ ಪಾತ್ರರಾಗಿದ್ದಾರೆ. ಮೊದಲ ಗೇಮ್ ನಲ್ಲಿ ಚೀನಾ ಆಟಗಾರ್ತಿ ಮೇಲುಗೈ ಸಾಧಿಸಿದ್ದರು, ಆ ಬಳಿಕ ಭವಿನಾ ಮಿಂಚಿನ ಪ್ರದರ್ಶನ ತೋರಿದರು. 7-11, 11-7, 11-4, 9-11, 11-8 ಅಂಕಗಳ ಸಹಿತ 3-2 ಅಂತರದಲ್ಲಿ ಗೆದ್ದು ಭವಿನಾ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.

Edited By : Nirmala Aralikatti
PublicNext

PublicNext

28/08/2021 09:22 am

Cinque Terre

85.18 K

Cinque Terre

1

ಸಂಬಂಧಿತ ಸುದ್ದಿ