ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಕ್ಸರ್ ಮಳೆ ಸುರಿಸಿದ ಎಂಎಸ್‌ಡಿ: ಗಲ್ಲಿ ಕ್ರಿಕೆಟ್ ನೆನಪಿಸುವ ವಿಡಿಯೋ

ದುಬೈ: ಐಪಿಎಲ್ 14ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್‌ ಪಂದ್ಯಗಳಿಗೆ ದಿನಗಣನೆ ಆರಂಭವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ ಅಭ್ಯಾಸ ಆರಂಭಿಸಿದೆ.

ಯುಎಇನಲ್ಲಿ ನಡೆಯಲಿರುವ ಈ ಐಪಿಎಲ್ ಪಂದ್ಯಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಸೇರಿದಂತೆ ಕೆಲ ತಂಡಗಳು ಈಗಾಗಲೇ ದುಬೈ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿದೆ. ಅಭ್ಯಾಸದ ಕೆಲ ಕುತೂಹಲಕಾರಿ ವಿಡಿಯೋಗಳನ್ನು ಸಿಎಸ್‌ಕೆ ತಂಡವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದೆ.

ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕಠಿಣ ಅಭ್ಯಾಸ ಆರಂಭಿಸಿದ್ದು, ಸಿಕ್ಸ್ ಮೇಲೆ ಸಿಕ್ಸ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಈ ವಿಡಿಯೋದಲ್ಲಿ ಸ್ವತಃ ಎಂಎಸ್ ಧೋನಿ ಚೆಂಡನ್ನು ಹುಡುಕಲು ಇತರ ಸದಸ್ಯರ ಜೊತೆಗೆ ತೆರಳಿದ್ದಾರೆ. ಮೈದಾನದ ಹೊರಗಿನ ಪೊದೆಗಳಲ್ಲಿ, ಸಂದುಗಳಲ್ಲಿ ಧೋನಿ ಚೆಂಡು ಹುಡುಕಿದ್ದಾರೆ. ಇದು ಪಕ್ಕಾ ಗಲ್ಲಿ ಕ್ರಿಕೆಟ್ ನೆನಪಿಸುವಂತಿದೆ.

Edited By : Vijay Kumar
PublicNext

PublicNext

25/08/2021 08:30 am

Cinque Terre

46.82 K

Cinque Terre

0

ಸಂಬಂಧಿತ ಸುದ್ದಿ