ಕಲಬುರಗಿ: ಭಾರತದ ಮಾಜಿ ಫುಟ್‌ಬಾಲ್ ಆಟಗಾರ, 1960 ರೋಮ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸೈಯದ್ ಶಾಹಿದ್ ಹಕೀಮ್ (82) ಇಂದು ಹೃದಯಾಘಾತದಿಂದ ಕಲಬುರಗಿಯಲ್ಲಿ ಸಾವನ್ನಪ್ಪಿದ್ದಾರೆ.
ಹಕೀಮ್ ಸಾಬ್ ಎಂದೇ ಸೈಯದ್ ಶಾಹಿದ್ ಹಕೀಮ್ ಅವರು ಪ್ರಸಿದ್ಧರು. ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು, ನಂತರ ಅವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಹೈದರಾಬಾದ್ನಲ್ಲಿ ನಡೆಯಲಿದೆ ಎನ್ನಲಾಗಿದೆ.
ಸೈಯದ್ ಶಾಹೀದ್ ಹಕೀಮ್ ಅವರ ತಂದೆಯ ಅಂತ್ಯಸಂಸ್ಕಾರ ನಡೆದ ಜಾಗದ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಒಲಿಂಪಿಕ್ಸ್ ಫುಟ್ಬಾಲ್ ಮಾಜಿ ಆಟಗಾರರಾಗಿದ್ದ ಶಾಹಿದ್ 1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಭಾರತೀಯ ಫುಟ್ಬಾಲ್‌ನೊಂದಿಗೆ 5 ದಶಕಗಳ ಒಡನಾಟ ಹೊಂದಿದ್ದರು. 1988ರ ಏಷಿಯನ್ ಕಪ್ನಲ್ಲಿ ಹಲವು ಪಂದ್ಯಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಪ್ರತಿಷ್ಠಿತ ದ್ರೋಣಾಚಾರ್ಯ, ಮೇಜರ್ ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕಾರಕ್ಕೆ ಹಕೀಮ್ ಭಾಜನರಾಗಿದ್ದರು.
PublicNext
22/08/2021 07:04 pm