ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್‌ಸಿಬಿ ಕೋಚ್ ಸ್ಥಾನಕ್ಕೆ ಸೈಮನ್ ಕ್ಯಾಟಿಚ್ ಗುಡ್​ಬೈ- ನೂತನ ಕೋಚ್ ಯಾರು ಗೊತ್ತಾ?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ದ್ವಿತೀಯ ಆವೃತ್ತಿಗೂ ಮುನ್ನ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ತಂಡದಲ್ಲಿ ಒಂದಿಷ್ಟು ಆಟಗಾರರು ಮತ್ತು ಮುಖ್ಯ ಕೋಚ್ ಕೂಡ ಬದಲಾಗಿದ್ದಾರೆ. ಐಪಿಎಲ್ ದ್ವಿತೀಯ ಹಂತಕ್ಕೆ ಆರ್‌ಸಿಬಿ ಮುಖ್ಯ ಕೋಚ್ ಆಗಿ ಸೈಮನ್ ಕಟಿಚ್ ಬದಲು ಮೈಕ್ ಹೆಸನ್ ಆರಿಸಲ್ಪಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆ ಈ ಸಂಗತಿ ಖಾತರಿಪಡಿಸಿದೆ.

ಇಂದು 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರ್​ಸಿಬಿ ಹೆಡ್ ಕೋಚ್ ಸೈಮನ್ ಕ್ಯಾಟಿಚ್, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಸ್ಥಾನದಿಂದ ಸೈಮನ್ ಕ್ಯಾಟಿಚ್ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಕೋಚ್ ಹುದ್ದೆ ತೊರೆದಿರುವ ಸೈಮನ್ ಕ್ಯಾಟಿಚ್ ಸ್ಥಾನಕ್ಕೆ, ಆರ್​​ಸಿಬಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಕ್ ಹೆಸನ್, ನೂತನ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

2020ರಲ್ಲಿ ಕೋಚ್ ಆಗಿ ನೇಮಕಗೊಂಡಿದ್ದ ಕ್ಯಾಟಿಚ್, ಅದೇ ವರ್ಷ ಆರ್​ಸಿಬಿ ಪ್ಲೇ-ಆಫ್​ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಪ್ರಸಕ್ತ ವರ್ಷದಲ್ಲೂ ಕ್ಯಾಟಿಚ್‌ ಗರಡಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್​​ಸಿಬಿ, 7ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.

Edited By : Vijay Kumar
PublicNext

PublicNext

21/08/2021 06:53 pm

Cinque Terre

134.86 K

Cinque Terre

1