ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ಹಬ್ಬ ಐಪಿಎಲ್ 14ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ಉಳಿದ ಪಂದ್ಯಗಳಿಗೂ ಮುನ್ನ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ.
ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಹಾಗೂ ದುಷ್ಮಾಂತ ಚಮೀರಾ ಆರ್‌ಸಿಬಿ ತಂಡವನ್ನ ಸೇರಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಮ್ ಜಂಪಾ ಸ್ಥಾನದಲ್ಲಿ ಹಸರಂಗ ಹಾಗೂ ಡೇನಿಯಲ್ ಸ್ಯಾಮ್ಸ್ ಸ್ಥಾನದಲ್ಲಿ ದುಷ್ಮಂತ ಚಮೀರಾ ತಂಡವನ್ನ ಸೇರಿಕೊಂಡಿದ್ದಾರೆ. ಜೊತೆಗೆ ಉಳಿದ ಪಂದ್ಯಗಳಿಗೆ ಫಿನ್ ಅಲೆನ್ ಕೂಡ ಅಲಭ್ಯರಾಗಿದ್ದು, ಅವರ ಸ್ಥಾನದಲ್ಲಿ ಸಿಂಗಪೂರ್ ಕ್ರಿಕೆಟ್ ತಂಡದ ಆಲ್ರೌಂಡರ್ ಟಿಮ್ ಡೇವಿಡ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮಾಹಿತಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
PublicNext
21/08/2021 05:23 pm