ಬಾರ್ಸಿಲೋನಾ ತಂಡದಿಂದ ಲಿಯೊನೆಲ್ ಮೆಸ್ಸಿ ನಿರ್ಗಮನವು ಒಂದು ಭಾವನಾತ್ಮಕ ಸಂಗತಿಯಾಗಿತ್ತು. ಅರ್ಜೆಂಟೀನಾ ಸೂಪರ್ಸ್ಟಾರ್ ತನ್ನ ವಿದಾಯ ಭಾಷಣ ಮಾಡುವಾಗ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು.
ಮೆಸ್ಸಿ ತಮ್ಮ ವೃತ್ತಿಜೀವನದ 21 ವರ್ಷಗಳ ಸುದೀರ್ಘ ಸಂಬಂಧಕ್ಕೆ ವಿದಾಯ ಹೇಳಿದರು. ಈಗ ಅವರು ಹೊಸ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಲಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ಮೆಸ್ಸಿ ತಂಡ ತೊರೆದ ವಿಚಾರವಲ್ಲ. ಬದಲಿಗೆ, ತಮ್ಮ ವಿದಾಯದ ಭಾಷಣದ ವೇಳೆ ಕಣ್ಣೀರನ್ನು ಒರೆಸಿಕೊಳ್ಳಲು ಬಳಸಿದ್ದ ಟಿಶ್ಯೂ ಪೆಪರ್ ಹರಾಜಿಗಿರುವುದು.
ಹೌದು. ಲಿಯೊನೆಲ್ ಮೆಸ್ಸಿ ಕಣ್ಣೀರು ಒರೆಸಿದ ಟಿಶ್ಯೂ ಪೇಪರ್ 1 ಮಿಲಿಯಲ್ ಯು.ಎಸ್ ಡಾಲರ್ ಅಂದ್ರೆ (7 ಕೋಟಿ 43 ಲಕ್ಷ 77 ಸಾವಿರ ರೂಪಾಯಿ)ಗೆ ಹರಾಜಿಗಿಡಲಾಗಿದೆ. ಇದು ಅಚ್ಚರಿ ಎನಿಸಿದರೂ ಸತ್ಯ.
ವರದಿ ಪ್ರಕಾರ, ಲಿಯೊನೆಲ್ ಮೆಸ್ಸಿ ಟಿಶ್ಯೂದಲ್ಲಿ ಕಣ್ಣೀರು ಒರೆಸಿ ಪಕ್ಕಕ್ಕಿಟ್ಟಿದ್ದನ್ನು ಎತ್ತಕೊಂಡ ಅಪರಿಚಿತನೊಬ್ಬ, ಒಂದು ಮಿಲಿಯನ್ ಯು.ಎಸ್ ಡಾಲರ್ಗೆ ಹರಾಜಿಗಿಟ್ಟಿದ್ದಾರೆ. ಆ ಟಿಶ್ಯೂವನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಇಡಲಾಗಿದೆ.
PublicNext
19/08/2021 05:56 pm