ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಗ್ಲೆಂಡ್‌ ತಂಡಕ್ಕೆ ಕೆ.ಎಲ್.ರಾಹುಲ್ ಎಚ್ಚರಿಕೆ.!

ಲಂಡನ್: ಲಾರ್ಡ್ಸ್​​​​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ​ ಇಂಡಿಯಾ 151 ರನ್​​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಆದರೆ ಇಷ್ಟರ ಮಟ್ಟಿಗೆ ರೋಚಕತೆ ಹುಟ್ಟಿಸಲು ಈ ಪಂದ್ಯದಲ್ಲಿ ಆಟಗಾರರ ನಡುವೆ ನಡೆದ ಘರ್ಷಣೆಗಳೇ ಸಾಕ್ಷಿ.

ವಿರಾಟ್​ ಕೊಹ್ಲಿ- ಜೇಮ್ಸ್​ ಆ್ಯಂಡರ್​ಸನ್​, ಜಸ್​ಪ್ರಿತ್​ ಬೂಮ್ರಾ- ಜೇಮ್ಸ್​ ಆ್ಯಂಡರ್​ಸನ್​, ಬೂಮ್ರಾ- ಮಾರ್ಕ್​​ವುಡ್​, ಸಿರಾಜ್​ – ರಾಬಿನ್​​ಸನ್​ ಮತ್ತು ಮೊಹಮ್ಮದ್​ ಶಮಿ – ಜೋಸ್​ ಬಟ್ಲರ್​ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಭಾರತದ ಬ್ಯಾಟಿಂಗ್ ವೇಳೆ ಕೆಣಕುತ್ತಿದ್ದ ಆಂಗ್ಲರಿಗೆ ವಿರಾಟ್ ಸೇನೆ ತಿರುಗೇಟು ನೀಡ್ತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಲ್.ರಾಹುಲ್, "ಎರಡು ಬಲಿಷ್ಠ ತಂಡಗಳು ಆಡುವಾಗ ಶ್ರೇಷ್ಠ ಮಟ್ಟದ ಕೌಶಲ ಮತ್ತು ಸ್ವಲ್ಪ ಇಂತಹ ಮಾತುಗಳು ಇದ್ದೇ ಇರುತ್ತವೆ. ಆದರೆ ನಾವು ಇಂತಹ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ನಮ್ಮ ಒಬ್ಬರನ್ನು ಕೆಣಕಿದರೂ 11 ಮಂದಿಯೂ ತಿರುಗಿ ಬೀಳುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Vijay Kumar
PublicNext

PublicNext

17/08/2021 03:48 pm

Cinque Terre

58.79 K

Cinque Terre

3

ಸಂಬಂಧಿತ ಸುದ್ದಿ