ಲಂಡನ್: ಇಂಗ್ಲೆಂಡ್ ಅಭಿಮಾನಿಯೊಬ್ಬ ಟೀಂ ಇಂಡಿಯಾ ಜರ್ಸಿ ತೊಟ್ಟ ಲಾರ್ಡ್ಸ್ ಮೈದಾನಕ್ಕಿಳಿದು ಅಚ್ಚರಿ ಮೂಡಿಸಿದ್ದಾನೆ. ಹೌದು ಇಂಗ್ಲೆಂಡ್ ಹಾಗೂ ಭಾರತ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಇಂತಹ ವಿಶೇಷ ಘಟನೆಯೊಂದು ನಡೆದಿದೆ. ಅತ್ತ ವಿಕೆಟ್ ಉರುಳಿಸಲು ಟೀಂ ಇಂಡಿಯಾ 12ನೇ ಆಟಗಾರನ ಕರೆತಂದಿಯಾ ಅನ್ನೋ ಗೊಂದಲ ಇಂಗ್ಲೆಂಡ್ ತಂಡಕ್ಕೆ. ಇತ್ತ ಟೀಂ ಇಂಡಿಯಾ ನಮ್ಮ ತಂಡದಲ್ಲಿ ಇದು ಯಾರು ಜಾರ್ವೋ ಎಂದು ಚಕಿತಗೊಂಡ ಸಂದರ್ಭ ಸೃಷ್ಟಿಯಾಗಿದೆ.
ಇಂಗ್ಲೆಂಡ್ ಅಭಿಮಾನಿಯೊಬ್ಬ, ಟೀಂ ಇಂಡಿಯಾ ಟೆಸ್ಟ್ ಜರ್ಸಿ ತೊಟ್ಟು ನೇರವಾಗಿ ಪಿಚ್ ಬಳಿ ಬಂದಿದ್ದಾನೆ. ಜರ್ಸಿ ಹಿಂದೆ ಹೆಸರು ಜಾರ್ವೋ ಎಂದು ಬರೆಯಲಾಗಿದೆ. ಜರ್ಸಿ ನಂಬರ್ 69 ಎಂದು ನಮೂದಿಸಲಾಗಿದೆ. ಒಂದು ಕ್ಷಣ ಟೀಂ ಇಂಡಿಯಾ ಕ್ರಿಕೆಟಿಗರೇ ಗೊಂದಲಕ್ಕೀಡಾಗಿದ್ದಾರೆ. ಅಷ್ಟರಲ್ಲೇ ಇದು ಇಂಗ್ಲೆಂಡ್ ಅಭಿಮಾನಿಯ ಕಿತಾಪತಿ ಎಂದು ಅಧಿಕಾರಿಗಳಿಗೆ ಅರಿವಾಗಿದೆ. ತಕ್ಷಣ ಮೈದಾನಕ್ಕೆ ಆಗಮಿಸಿದ ಅಧಿಕಾರಿ ಇಲ್ಲಿಗೆ ಯಾಕೆ ಬಂದಿದ್ದಿ ಎಂದು ಪ್ರಶ್ನಿಸಿದ್ದಾರೆ. ಕಿಲಾಡಿ ಅಭಿಮಾನಿ ಜರ್ಸಿ ತೋರಿಸಿ ತಾನು ಟೀಂ ಇಂಡಿಯಾ ಕ್ರಿಕೆಟಿಗ ಎಂದಿದ್ದಾನೆ.
ಭದ್ರತಾ ಅಧಿಕಾರಿಗಳು ಇಂಗ್ಲೆಂಡ್ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಈ ಸಂದರ್ಭ ನೆನೆದು ನಕ್ಕು ನೀರಾಗಿದ್ದಾರೆ.
PublicNext
14/08/2021 10:35 pm