ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗನ ಶತಕದ ವೈಭವ- ಲಾರ್ಡ್ಸ್ ಮೈದಾನದಲ್ಲಿ 31 ವರ್ಷಗಳ ಬಳಿಕ ಮರುಕಳಿಸಿದ ಸಾಧನೆ

ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಕನ್ನಡಿಗ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 276 ರನ್​ ಗಳಿಸಿದೆ.

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 31 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಟೀಂ ಇಂಡಿಯಾ ಓಪನರ್ ಎಂಬ ಹೆಗ್ಗಳಿಕೆ ಕೆ.ಎಲ್.ರಾಹುಲ್ ಪಾತ್ರರಾಗಿದ್ದಾರೆ. 2ನೇ ಟೆಸ್ಟ್​ನ ಮೊದಲ​ ದಿನದಾಂತ್ಯಕ್ಕೆ 29 ವರ್ಷದ ಕೆ.ಎಲ್.ರಾಹುಲ್ 248 ಎಸೆತಗಳಲ್ಲಿ 127 ರನ್​ ಸಿಡಿಸಿದ್ದಾರೆ. ಎರಡನೇ ದಿನದ ಆಟಕ್ಕೆ ವಿಕೆಟ್‌ ಕಾಯ್ದುಕೊಂಡಿದ್ದಾರೆ.

ಜುಲೈ 1990ರಲ್ಲಿ ಟೀಂ ಇಂಡಿಯಾದ ಓಪರ್ ಆಗಿದ್ದ ರವಿಶಾಸ್ತ್ರಿ ಅವರು ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು.

Edited By : Vijay Kumar
PublicNext

PublicNext

13/08/2021 08:48 am

Cinque Terre

24.88 K

Cinque Terre

2

ಸಂಬಂಧಿತ ಸುದ್ದಿ