ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಸ್ತಿಪಟು ವಿನೇಶ್ ಪೋಗಟ್‌ಗೆ ಬಿಗ್‌ಶಾಕ್.!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಹಾಗೂ ಸಹ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲುಎಫ್ಐ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ವಿನೇಶ್ ಪೋಗಟ್ ಅವರು ಭಾರತದಿಂದ ಟೋಕಿಯೋಗೆ ತೆರಳಿದ್ದ ಸಹ ಕುಸ್ತಿಪಟುಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ತಮ್ಮ ಪ್ರಾಯೋಜಕತ್ವವನ್ನು ಕೈಬಿಟ್ಟು ಇತರೆ ಕಂಪನಿಗಳ ಬಟ್ಟೆ ಧರಿಸಿ ಕಣಕ್ಕಿಳಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರತೀಯ ಕುಸ್ತಿ ಫೆಡರೇಶನ್ ಕ್ರಮಕೈಗೊಂಡಿದೆ. ಜೊತೆಗೆ ಆಗಸ್ಟ್ 16ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಇದೇ ವೇಳೆ ಮಹಿಳಾ ಕುಸ್ತಿಪಟು ಸೋಮನ್ ಮಲಿಕ್ ಗೆ ಡಬ್ಲುಎಫ್ಐ ನೋಟಿಸ್ ನೀಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿಶ್ವದ ನಂಬರ್ 1 ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಪದಕ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರು ನಿರಸ ಪ್ರದರ್ಶನ ನೀಡಿದ್ದರು. 53 ಕೆಜಿ ತೂಕ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಬೆಲಾರಸ್ ನ ವನೆಸ್ಸಾ ಕಲಾಡ್ಜಿನ್ಸ್ಕಯಾ ವಿರುದ್ಧ ಸೋಲು ಕಂಡಿದ್ದರು.

Edited By : Vijay Kumar
PublicNext

PublicNext

11/08/2021 07:43 am

Cinque Terre

35.26 K

Cinque Terre

0

ಸಂಬಂಧಿತ ಸುದ್ದಿ