2020 ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಮುಗಿಸಿ ನೀರಜ್ ಚೋಪ್ರಾ, ರವಿ ದಹಿಯಾ, ಭಜರಂಗ್ ಪುನಿಯಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ಟೋಕಿಯೊದಿಂದ ದೆಹಲಿಗೆ ಮರಳಿದರು.
ಈ ಎಲ್ಲ ಆಟಗಾರರು ಆಗಸ್ಟ್ 9 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರನ್ನು ಸ್ವಾಗತಿಸಲು ಕ್ರೀಡಾ ಅಧಿಕಾರಿಗಳು, ವಿವಿಧ ಒಕ್ಕೂಟಗಳು, ಮಾಧ್ಯಮಗಳು ಹಾಗೂ ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಡ್ರಮ್ ಮತ್ತು ತ್ರಿವರ್ಣವನ್ನು ಹೊತ್ತು ಆಟಗಾರರನ್ನು ಸ್ವಾಗತಿಸಿದರು. ಈ ಕಾರಣದಿಂದಾಗಿ, ಆಟಗಾರರು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಬಹಳ ಸಮಯ ತೆಗೆದುಕೊಂಡರು.
PublicNext
09/08/2021 06:10 pm