ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಮೊದಲ ಮಹಿಳಾ ಗಾಲ್ಫರ್ ಗೆ ತಪ್ಪಿದ ಪದಕ

ಟೋಕಿಯೊ: ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತದ ಮೊದಲ ಮಹಿಳಾ ಗಾಲ್ಫರ್ ಆದಿತಿ ಅಶೋಕ್ ಅವರಿಗೆ ಕಂಚಿನ ಪದಕ ಜಸ್ಟ್ ಮಿಸ್ಸಾಗಿದೆ ಎನ್ನಬಹುದು. ಕೊನೆ ಕ್ಷಣದವರೆಗೂ ಅವರು ವೀರಾವೇದಿಂದ ಸೆಣಸಿದ್ದಾರೆ.

ಉತ್ತಮ ಸಾಧನೆ ಪ್ರದರ್ಶಿಸಿದ ಬೆಂಗಳೂರು ಮೂಲದ 23 ವರ್ಷದ ಅದಿತಿ ಅಶೋಕ್ ಕೊನೆಯ ಸುತ್ತಿನ ಅಂತ್ಯದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಲಿಂಪಿಕ್ ಪಂದ್ಯದಲ್ಲಿ ಉತ್ತಮ ಸಾಧನೆ ಮೆರೆದು ನಿರ್ಗಮಿಸಿದ್ದಾರೆ. ಆದರೆ ಅವರ ಪ್ರದರ್ಶನ ಕೊಂಡಾಡುವಂತಿತ್ತು.

ಮೂರನೇ ಹಂತದವರೆಗೂ ಅದಿತಿ ನ್ಯೂಜಿಲ್ಯಾಂಡ್ ನ ಕೊ ಲಿಡಿಯಾ ಮತ್ತು ಜಪಾನ್ ನ ಇನಾಮಿ ಮೊನಿಗೆ ಪ್ರಬಲ ಪೈಪೋಟಿ ನೀಡುತ್ತಲೇ ಬಂದರು. ಕೊನೆಯ ಎರಡು ಹೋಲ್ ಗಳಲ್ಲಿ ನ್ಯೂಜಿಲ್ಯಾಂಡ್ ನ ಕೊ ಲಿಡಿಯಾ, ಜಪಾನ್ ನ ಇನಾಮಿ ಮೊನಿ ಮುನ್ನಡೆ ಸಾಧಿಸಿದರು. ಹೀಗಾಗಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Edited By : Nagaraj Tulugeri
PublicNext

PublicNext

07/08/2021 09:02 pm

Cinque Terre

40.88 K

Cinque Terre

0