ಟೋಕಿಯೋ: ಫೈನಲ್ ತಲುಪಲು ಸಾಧ್ಯವಾಗದೇ ಗ್ರೇಟ್ ಬ್ರಿಟನ್ನೊಂದಿಗೆ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿ ವಿಫಲವಾದ ಭಾರತೀಯ ವನಿತೆಯರ ಹಾಕಿ ತಂಡದ ಸದಸ್ಯರು ಕ್ರೀಡಾಂಗಣದಲ್ಲೇ ಕಣ್ಣೀರು ಸುರಿಸಿದರು. ಈ ಮೂಲಕ ಒಲಿಂಪಿಕ್ಸ್ ಹಾಕಿಯಲ್ಲಿ ಚೊಚ್ಚಲ ಪದಲ ಗೆಲ್ಲುವ ಕನಸು ಈಡೇರಲಿಲ್ಲ. ಆದರೆ, ಸೋತರೂ ಕೋಟ್ಯಾಂತರ ಭಾರತೀಯರ ಮನ ಗೆದ್ದಿದ ರಾಣಿ ರಾಂಪಾಲ್ ಪಡೆ.
4-3 ಪಾಯಿಂಟ್ಗಳಿಂದ ಸೋಲು ಅನುಭವಿಸಿದ ನಂತರ ಕ್ರೀಡಾಂಗಣದಲ್ಲೇ ವನಿತೆಯರು ಗಳಗಳನೆ ಅತ್ತಿದ್ದು, ಗ್ರೇಟ್ ಬ್ರಿಟನ್ ತಂಡದ ಆಟಗಾರ್ತಿಯರು ಸಮಾಧಾನ ಮಾಡಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಆಟಗಾರ್ತಿಯರನ್ನು ಸಂತೈಸಿ ಬೆನ್ನುತಟ್ಟಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಸ್ವಲ್ಪದರಲ್ಲೇ ನಾವು ಪದಕ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡೆವು. ಆದರೆ ಮಹಿಳಾ ತಂಡದ ಈ ಪ್ರದರ್ಶನ ಹೊಸ ಭಾರತವನ್ನು ಪ್ರತಿಬಿಂಬಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ಟೋಕಿಯೋ ಒಲಿಂಪಿಕ್ಸ್ ಮಹಿಳಾ ತಂಡದ ದಿಟ್ಟ ಪ್ರದರ್ಶನ, ದೇಶದ ಯುವ ಸಹೋದರಿಯರಿಗೆ ಸ್ಫೂರ್ತಿಯಾಗಲಿದೆ. ಈ ತಂಡದ ಪ್ರದರ್ಶನದ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆಯಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರೇಟ್ ಬ್ರಿಟನ್ ಹಾಕಿ ತಂಡ ಕೂಡ ಭಾರತೀಯ ಹಾಕಿ ತಂಡವನ್ನು ಹೊಗಳಿದೆ. ಟೋಕಿಯೋ ಒಲಿಂಪಿಕ್ನಲ್ಲಿ ಹಾಕಿ ಇಂಡಿಯಾ ವಿಶೇಷ ಸಾಧನೆ ಮಾಡಿದೆ ಎಂದು ಟ್ವೀಟ್ ಮಾಡಿದೆ.
PublicNext
06/08/2021 11:55 am