ಟೋಕಿಯೋ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದ ಭಾರತೀಯ ಮಹಿಳಾ ತಂಡಕ್ಕಿದೆ ನಿರಾಸೆ ಉಂಟಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳಾ ಹಾಕಿ ಕಂಚಿನ ಪದಕಕ್ಕಾಗಿ ಇಂದು ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ 4-3 ಗೋಲುಗಳ ಅಂತರದ ಸೋಲನುಭವಿಸಿದೆ.
ಪ್ರಥಮ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದ ಭಾರತ ಮಹಿಳಾ ಹಾಕಿ ತಂಡವು ಬಲಿಷ್ಠ ಅರ್ಜೆಂಟಿನಾ ವಿರುದ್ಧ ಸೋಲು ಕಂಡಿತ್ತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. ಬಳಿಕ ಪಂದ್ಯವನ್ನು ಸಮಬಲಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿತಾದರೂ ಅದು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಭಾರತ ಮಹಿಳೆಯರ ತಂಡ 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಗಿತ್ತು.
PublicNext
06/08/2021 09:02 am