ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಿಂಚಿನ ಬೌಲಿಂಗ್, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ.
ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಮೊದಲ ಸೆಷನ್ ಅಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 97ರನ್ ಗಳಿಸಿದೆ. ಮೊದಲ ದಿನದ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಕಲೆ ಹಾಕಿದ್ದ ಭಾರತ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಇಂದು 2ನೇ ದಿನದಾಟ ಆರಂಭಿಸಿದ ಭಾರತಕ್ಕೆ, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್, ಭರ್ಜರಿ ಓಪನಿಂಗ್ ನೀಡಿದರು. ಇನ್ನೇನು ಈ ಜೋಡಿಯ ಜೊತೆಯಾಟ ಇನ್ನೇನು 100ರ ಗಡಿ ದಾಟುತ್ತಿತ್ತು ಅನ್ನೋವಾಗ, 97 ರನ್ಗೆ ಓಲೀ ರಾಬಿನ್ಸನ್ ಬ್ರೇಕ್ ಥ್ರೂ ನೀಡಿದರು. 36 ರನ್ ಗಳಿಸಿದ್ದ ರೋಹಿತ್ ಶರ್ಮಾ, ರಾಬಿನ್ಸನ್ ಬೌಲಿಂಗ್ನಲ್ಲಿ ಸ್ಯಾಮ್ ಕರನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಸದ್ಯ ರಾಹುಲ್ 48ರನ್ ಗಳಿಸಿದ್ದು ಕ್ರೀಸ್ನಲ್ಲಿದ್ದಾರೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 65.4 ಓವರ್‌ಗಳಲ್ಲಿ ಕೇವಲ 183 ರನ್/10 ವಿಕೆಟ್
PublicNext
05/08/2021 06:11 pm