ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ರವಿಕುಮಾರ್ ದಹಿಯಾ ಬೆಳ್ಳಿಯನ್ನು ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಎರಡನೇ ಬೆಳ್ಳಿ ಪದಕವನ್ನು ಗೆದ್ದಂತಾಗಿದೆ.
23 ವರ್ಷದ ವಯಸ್ಸಿನ ರವಿಕುಮಾರ್ ಅವರು 2 ಬಾರಿ ವಿಶ್ವಚಾಂಪಿಯನ್ ರಷ್ಯಾದ ಚೌರ್ ಉಗುವೆವ್ ವಿರುದ್ಧ 4-7 ಅಂಕಗಳಿಂದ ಸೋತು ಎರಡನೇ ಸ್ಥಾನವನ್ನು ಪಡೆದರು. ಉಗುವೆವ್ ಸತತ 16 ಪಂದ್ಯಗಳನ್ನು ಗೆದ್ದು ಒಲಿಂಪಿಕ್ಸ್ ಪ್ರವೇಶಿಸಿದ್ದರು. ಸೆಮಿಫೈನಲ್‍ನಲ್ಲಿ ಕಝಖಿಸ್ತಾನದ ನುರಿಸ್ಲಾಮ್ ಸನಯೆವ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರೂ ಭರ್ಜರಿ ಕಮ್‍ಬ್ಯಾಕ್ ಮಾಡುವ ಮೂಲಕ ರವಿಕುಮಾರ್ ರೋಚಕ ಗೆಲುವಿನೊಂದಿಗೆ ಫೈನಲ್ ಅರ್ಹತೆ ಪಡೆದುಕೊಂಡಿದ್ದರು.
ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದಲ್ಲಿ ಜನಿಸಿದ ರವಿಕುಮಾರ್ ದಹಿಯಾ ಈ ಹಿಂದೆ 2019ರ ವಿಶ್ವ ಚಾಂಪಿಯನ್‍ಷಿಪ್‍ನ 57 ಕೆಜಿ ವಿಭಾಗದಲ್ಲಿ ಕಂಚು, 2020ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ, 2021ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಸ್ವರ್ಣ, 2018ರ ಅಂಡರ್ 23 ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
PublicNext
05/08/2021 04:53 pm