ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21- 13, 21-15 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಸಿಂಧು ಅವರು ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 1ನೇ ಶ್ರೇಯಾಂಕಿತ ಚೈನೀಸ್ ತೈಪೆಯ ತೈ ತ್ಸು ವಿರುದ್ಧ ಸೆಣಸಿ 18-21, 12-21 ಅಂತರದಿಂದ ಸೋಲು ಕಂಡರು. ಹೀಗಾಗಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ಇಂದು ನಡೆದ ಪಂದ್ಯದಲ್ಲಿ ಪಿ.ಸಿಂಧು ಭರ್ಜರಿ ಗೆಲುವು ದಾಖಲಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಮೂಲಕ ಸದ್ಯ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಎರಡು ಪದಕಗಳನ್ನು (1 ಬೆಳ್ಳಿ ಮತ್ತು 1 ಕಂಚು) ಗೆದ್ದುಕೊಂಡಿದೆ. ಈ ಹಿಂದೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
PublicNext
01/08/2021 06:16 pm