ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Tokyo Olympics: ಪದಕದ ಹಾದಿಯಲ್ಲಿ ಪಿವಿ ಸಿಂಧು- ಸೆಮಿಫೈನಲ್‌ಗೆ ಎಂಟ್ರಿ

ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕದ ಬೇಟೆಗೆ ಮುನ್ನುಗ್ಗುತ್ತಿದ್ದಾರೆ. ಇಂದು ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜಪಾನ್​ನ ಅಕನೆ ಯಾಮಗುಚಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮುಸಾಷಿನೊ ಫಾರೆಸ್ಟ್ ಪ್ಲಾಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 21-13, 22-20ರ ಅಂತರದಿಂದ ಸಿಂಧು ಯಾಮಗುಚಿ ವಿರುದ್ಧ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ ವೆಲ್ಟರ್ ವೇಟ್ 64-69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಭಾರತದ ಲವ್ಲಿನಾ ಅವರು ಚೈನೀಸ್ ತೈಪೆ(ತೈವಾನ್) ಚಿನ್ ಚೀನ್ ಅವರನ್ನು 4-1 ಅಂಕದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲರಿಗೂ ಪದಕ ಸಿಗಲಿದೆ. ಈ ಮೂಲಕ ಲವ್ಲಿನಾ ಅವರು ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ.

Edited By : Vijay Kumar
PublicNext

PublicNext

30/07/2021 03:15 pm

Cinque Terre

76.63 K

Cinque Terre

2

ಸಂಬಂಧಿತ ಸುದ್ದಿ