ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Tokyo Olympics: ನಿನ್ನೆ ಪತಿ, ಇಂದು ಪತ್ನಿ ಕ್ವಾರ್ಟರ್ ಫೈನಲ್ ಪ್ರವೇಶ!

ಟೋಕಿಯೋ: ಭಾರತದ ಆರ್ಚರ್ ದೀಪಿಕಾ ಕುಮಾರಿ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ಎಂಟನೇ ದಿನವಾದ ಇಂದು (ಜು.30) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

ರಷ್ಯಾ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ದೀಪಿಕಾ ಕುಮಾರಿ ಜಯ ಸಾಧಿಸಿದರು. ಮೊದಲು ನಡೆದ 5 ಸುತ್ತುಗಳಲ್ಲಿ ಕ್ಸೆನಿಯಾ ವಿರುದ್ಧ ದೀಪಿಕಾ ಕುಮಾರಿ 28-25, 26-27, 28-27, 26-26 ಹಾಗೂ 25-28 ಅಂಕಗಳನ್ನು ಗಳಿಸಿದರು. ಈ ಮೂಲಕ ಇಬ್ಬರ ನಡುವಿನ ಪಂದ್ಯದಲ್ಲಿ ಸಮಬಲ ಬಂದ ಕಾರಣ ಮತ್ತೊಂದು ಅತ್ಯಧಿಕ ಶೂಟ್ ಆಫ್ ಸುತ್ತನ್ನು ಆಯೋಜಿಸಲಾಯಿತು. ಈ ಶೂಟ್ ಆಫ್ ಸುತ್ತಿನಲ್ಲಿ ಕ್ಸೆನಿಯಾ ಪೆರೋವಾಗಿಂತ ಹೆಚ್ಚು ಅಂಕಗಳನ್ನು ಗಳಿಸಿದ ದೀಪಿಕಾ ಕುಮಾರಿ ಪಂದ್ಯವನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಮಾಡಿದ್ದಾರೆ.

ಇನ್ನು ನಿನ್ನೆಯಷ್ಟೇ ದೀಪಿಕಾ ಕುಮಾರಿ ಪತಿ ಅತನು ದಾಸ್ ಕೂಡ ಪುರುಷರ ಆರ್ಚರಿ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್, ವಿಶ್ವದ ನಂ.3 ರ‍್ಯಾಂಕ್‌ನ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ದಾಖಲಿಸಿದ್ದರು.

Edited By : Vijay Kumar
PublicNext

PublicNext

30/07/2021 07:58 am

Cinque Terre

47.6 K

Cinque Terre

3

ಸಂಬಂಧಿತ ಸುದ್ದಿ