ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಬ್ಯಾಟಿಂಗ್ ವೈಫಲ್ಯ- 7 ವಿಕೆಟ್‌ಗಳಿಂದ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಶ್ರೀಲಂಕಾ

ಕೊಲಂಬೋ: ಶ್ರೀಲಂಕಾ ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡವು ಮೂರನೇ ಟಿ20 ಸರಣಿಯನ್ನು ಹೀನಾಯವಾಗಿ ಸೋತು ಸರಣಿಯನ್ನು ಕೈ ಚೆಲ್ಲಿದೆ.

ಕೊಲಂಬೋದ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಟಿ-20 ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಏಳು ವಿಕೆಟ್ ಗಳಿಂದ ಗೆದ್ದು ಬೀಗಿದ್ದು, ಸರಣಿಯನ್ನು 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಎರಡನೇ ಓವರ್‌ನಲ್ಲೇ ದೊಡ್ಡ ಆಘಾತ ಎದುರಾಯಿತು. 12 ರನ್ ಗಳಿಸುವಷ್ಟರಲ್ಲಿ ಚಾಮೀರಾ ದೊಡ್ಡ ವಿಕೆಟ್ ಪಡೆದುಕೊಂಡರು. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಶೂನ್ಯಕ್ಕೆ ಔಟಾದರು. ನಂತರ ಬಂದ ದೇವದತ್ ಪಡಿಕ್ಕಲ್ ಕೂಡ ಕೇವಲ 9 ರನ್ ಗಳಿಸುವಷ್ಟರಲ್ಲಿ ರನ್ ಔಟ್ ಆದರು.

ಬಳಿಕ ಮೈದಾನಕ್ಕೆ ಇಳಿದ ಋತುರಾಜ್ ಗಾಯಕ್ವಾಡ್ 14 ರನ್ ಗಳಿಸಿ ಹಸರಂಗ ಬೌಲಿಂಗ್‌ನಲ್ಲಿ ಎಲ್ ಬಿಡಬ್ಲ್ಯೂ ಗೆ ಬಲಿಯಾದರು. ಸಂಜು ಸ್ಯಾಮ್ಸನ್ (0 ರನ್) ಕೂಡ ಹಸರಂಗ ಬೌಲಿಂಗ್‌ನಲ್ಲಿ ಎಲ್ ಬಿಡಬ್ಲ್ಯೂಗೆ ಬಲಿಯಾದರು. ನಂತರ ನಿತೀಶ್ ರಾಣಾ 6 ರನ್, ಭುವನೇಶ್ವರ್ ಕುಮಾರ್ 16 ರನ್, ರಾಹುಲ್ ಚಹಾರ್ 5 ರನ್, ಚೇತನ್ ಸಕಾರಿಯಾ 5 ರನ್ ಗಳಿಸಿದರು. ಇದರಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ಪರ ಅವಿಷ್ಕಾ ಫರ್ನಾಂಡೋ 12 ರನ್, ಮಿನೊದ್ ಭಾನುಕಾ 18 ರನ್, ಸದೀರಾ ಸಮರವಿಕ್ರಮ್ 6 ರನ್, ಧನಂಜಯ ಡಿಸಿಲ್ವಾ 23 ರನ್, ವಾನಿಂದು ಹಸರಂಗ 14 ರನ್ ಕಲೆಹಾಕುವುದರೊಂದಿಗೆ ಇನ್ನೂ 33 ಎಸೆತ ಬಾಕಿ ಇರುವಂತೆಯೇ ಏಳು ವಿಕೆಟ್ ಗಳಿಂದ ಶ್ರೀಲಂಕಾ ಗೆಲುವು ಸಾಧಿಸಿತು.

Edited By : Vijay Kumar
PublicNext

PublicNext

30/07/2021 07:18 am

Cinque Terre

44.2 K

Cinque Terre

0

ಸಂಬಂಧಿತ ಸುದ್ದಿ