ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ VS ಶ್ರೀಲಂಕಾ ಟಿ20: ಧನಂಜಯನ ಹೋರಾಟದಿಂದ ಶ್ರೀಲಂಕಾಗೆ 4 ವಿಕೆಟ್‌ಗಳ ಜಯ

ಕೊಲಂಬೋ: ಧನಂಜಯ ಡಿ ಸಿಲ್ವಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ಬೌಲರ್‌ಗಳ ಉತ್ತಮ ಬೌಲಿಂಗ್‌ನಿಂದ ಶ್ರೀಲಂಕಾ ತಂಡವು ಭಾರತದ ವಿರುದ್ಧದ ಜಯ ಗಳಿಸಿದೆ.

ಕೊಲಂಬೋದ ಪ್ರೇಮ್ ದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ನಾಲ್ಕು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಉಭಯ ತಂಡಗಳು 1-1 ಅಂಕಗಳೊಂದಿಗೆ ಸಮಬಲ ಸಾಧಿಸಿವೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಟೀಂ ಇಂಡಿಯಾ ಪರ ಋತುರಾಜ್ ಗಾಯಕ್ವಾಡ್ 21 ರನ್, ಶಿಖರ್ ಧವನ್ 40 ರನ್, ದೇವದತ್ ಪಡಿಕಲ್ 29, ನಿತೀಶ್ ರಾಣಾ 9 ರನ್ ಗಳಿಸಿದರು.

ಟೀಂ ಇಂಡಿಯಾ ನೀಡಿದ 132 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಧನಂಜಯ ಡಿ ಸಿಲ್ವಾ ಅಜೇಯ (40 ರನ್), ಅವಿಷ್ಕಾ ಫರ್ನಾಂಡೋ (11 ರನ್‌), ಮಿನೊದ್ ಬಾನುಕಾ (36 ರನ್), ಸದೀರಾ ಸಮರ ವಿಕ್ರಮ (8 ರನ್), ವಾನಿಂದು ಹಸರಂಗ 15 ಸಹಾಯದಿಂದ ಆರು ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು. ಶ್ರೀಲಂಕಾ ಪರ 40 ರನ್ ಗಳಿಸಿದ ಧನಂಜಯ ಡಿ ಸಿಲ್ವಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Edited By : Vijay Kumar
PublicNext

PublicNext

29/07/2021 07:31 am

Cinque Terre

30.18 K

Cinque Terre

0

ಸಂಬಂಧಿತ ಸುದ್ದಿ