ಟೋಕಿಯೋ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು 2016ರ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಮತ್ತೊಂದು ಗೆಲುವು ದಾಖಲಿಸಿ, ಪದಕದತ್ತ ಹೆಜ್ಜೆ ಇಟ್ಟಿದ್ದಾರೆ.
ಪಿ.ವಿ ಸಿಂಧು ಅವರು ಭಾರವಾರದಂದು ನಡೆದ ಟೋಕಿಯೊ ಒಲಿಂಪಿಕ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಆಟಗಾರ್ತಿ ಪುಲಿಕರ್ಪೋವಾ ವಿರುದ್ಧ ಗೆಲುವನ್ನು ಸಾಧಿಸಿದ್ದರು. ಬಳಿಕ ತಮ್ಮ ಎರಡನೇ ಪಂದ್ಯವನ್ನು ಹಾಂಕಾಂಗ್‌ನ ಚೆಯುಂಗ್ ನ್ಗಾನ್ ಯಿ ವಿರುದ್ಧ 2-0 ಅಂತರದಿಂದ ಜಯಗಳಿಸಿದ್ದಾರೆ. ಈ ಮೂಲಕ 16ರ ಸುತ್ತಿಗೆ ಅಂದರೆ ಪ್ರೀ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
PublicNext
28/07/2021 10:17 am