ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಏಕದಿನ ಪಂದ್ಯವನ್ನು 1971ರ ಜನವರಿ 5ರಂದು ಆಡಲಾಯಿತು. 39 ವರ್ಷ, 1 ತಿಂಗಳು 19 ದಿನಗಳ ನಂತರ ಅಂದರೆ 2010ರ ಫೆಬ್ರವರಿ 24ರಂದು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕ ದಾಖಲಾಯಿತು. ಈ ಸಾಧನೆ ಮಾಡಿದ್ದು ಬೇರೆ ಯಾರೂ ಅಲ್ಲ, ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್.
ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಎರಡನೇ ಪಂದ್ಯ 2010ರ ಫೆಬ್ರವರಿ 24ರಂದು ನಡೆದಿತ್ತು. ಟಾಸ್ ಗೆದ್ದ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಸೆಹ್ವಾಗ್ ಅವರೊಂದಿಗೆ ಸಚಿನ್ ಕ್ರೀಸ್‌ಗೆ ಇಳಿದರು. ಆದರೆ ಕೇವಲ 25 ರನ್‌ಗೆ ಮೊದಲ ವಿಕೆಟ್ ಪತನವಾಯಿತು. ಸೆಹ್ವಾಗ್ ಅವರಿಗೆ ಕೇವಲ 9 ರನ್ ಗಳಿಸಲು ಸಾಧ್ಯವಾಯಿತು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 25 ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿ 200 ರನ್ ಗಳಿಸಿದರು. ಇದರೊಂದಿಗೆ ಪಾಕಿಸ್ತಾನದ ಸಯೀದ್ ಅನ್ವರ್ ಅವರು 13 ವರ್ಷಗಳ ಹಿಂದೆ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು 194 ರನ್ ಗಳಿಸಿದ್ದ ದಾಖಲೆಯನ್ನು ಸಚಿನ್ ಹಿಂದಿಕ್ಕಿದರು.
PublicNext
24/02/2021 08:28 am