ಚೆನ್ನೈ: ಆಸ್ಟ್ರೇಲಿಯಾದ ಆಲ್‌ರೌಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದುಬಾರಿ ಬೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಿದ್ದಾರೆ.
14ನೇ ಆವೃತ್ತಿಯ ಐಪಿಎಲ್-2021 ಮಿನಿ ಹರಾಜು ಪ್ರಕ್ರಿಯೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೂಲ ಬೆಲೆ 2 ಕೋಟಿ ರೂ. ನಿಗದಿಯಾಗಿತ್ತು. ಆದರೆ ಅವರ ಮೇಲೆ ಆಸಕ್ತಿ ತೋರಿದ ಆರ್‌ಸಿಬಿ ಬರೋಬ್ಬರಿ 14.25 ಕೋಟಿ ರೂ.ಗೆ ಖರೀದಿಸಿದೆ.
ಇದಕ್ಕೂ ಮುನ್ನ ದಿನವಾದ ಬುಧವಾರ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು. ‘ಎಬಿ ಡಿ ವಿಲಿಯರ್ಸ್ ಜೊತೆ ಆಡುವುದು ನನ್ನ ಕನಸು. ಎಬಿಡಿಯನ್ನು ನಾನು ಆರಾಧಿಸುತ್ತೇನೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡುವುದು ಸಹ ಅತ್ಯುತ್ತಮ ಅನುಭವ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಕೊಹ್ಲಿ ಜೊತೆ ಬ್ಯಾಟ್ ಮಾಡಲು ಸಹ ಇಚ್ಛಿಸುತ್ತೇನೆ’ ಎಂದುಹೇಳಿದ್ದರು.ಅ
ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ, ಈ ಬಾರಿ ತಂಡ ಅವರನ್ನು ಕೈಬಿಟ್ಟಿದೆ. ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಡೆಲ್ಲಿ, ಮುಂಬೈ ತಂಡದ ಪರವೂ ಆಡಿದ್ದಾರೆ.
PublicNext
18/02/2021 03:57 pm