ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಐಪಿಎಲ್‌ಗೆ ಪ್ರೇಕ್ಷಕರ ಪ್ರವೇಶದ ನಿರ್ಧಾರ ಶೀಘ್ರ ಪ್ರಕಟ'

ಅಹ್ಮದಾಬಾದ್: ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ವೀಕ್ಷಕರಿಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಶ್ರೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

'ಈ ವರ್ಷ ಕ್ರಿಕೆಟ್ ವಿಚಾರಕ್ಕೆ ದೊಡ್ಡ ವರ್ಷ ಎನಿಸಲಿದೆ. ಈ ಬಾರಿಯ ಐಪಿಎಲ್ ವೇಳೆ ಪ್ರೇಕ್ಷಕರನ್ನು ಮತ್ತೆ ಮೈದಾನಕ್ಕೆ ಕರೆತರಲಾಗುತ್ತದೆಯೇ ಎಂದು ನೋಡೋಣ. ಈ ಬಗ್ಗೆ ಅಂತಿಮ ನಿರ್ಧಾರ ಶೀಘ್ರ ಪ್ರಕಟಿಸಲಿದ್ದೇವೆ. ಒಂದಂತೂ ನಿಜ, ಈ ಬಾರಿಯದ್ದು ಮತ್ತೊಂದು ದೊಡ್ಡ ಐಪಿಎಲ್ ಟೂರ್ನಿ ಅನ್ನಿಸಲಿದೆ' ಎಂದು ತಿಳಿಸಿದರು.

Edited By : Vijay Kumar
PublicNext

PublicNext

17/02/2021 10:13 am

Cinque Terre

44.44 K

Cinque Terre

0