ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ವಿಕೆಟ್‌, ಶತಕದ ಅಬ್ಬರ: ತವರಿನಲ್ಲಿ ಅಶ್ವಿನ್ ಮಿಂಚಿಂಗ್

ಚೆನ್ನೈ: ಆರಂಭಿಕ ಕುಸಿತ ಕಂಡರೂ ತವರಿನಲ್ಲಿ ರವಿಚಂದ್ರನ್‌ ಅಶ್ವಿನ್ ಬಾರಿಸಿದ ಅಮೋಘ ಶತಕ ಹಾಗೂ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಅರ್ಧಶತಕದಿಂದ ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಬೃಹತ್‌ ಮೊತ್ತದ ಗುರಿ ನೀಡಿದೆ.

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ರವಿಚಂದ್ರನ್‌ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 43ಕ್ಕೆ 5 ವಿಕೆಟ್‌ ಪಡೆದು ಮಿಂಚಿದ್ದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದರು. ಬಳಿಕ ಬ್ಯಾಟಿಂಗ್‌ನಲ್ಲೂ ಅದೇ ಆತ್ಮವಿಶ್ವಾಸ ಕಾಯ್ದುಕೊಂಡು ಇಂಗ್ಲೆಂಡ್‌ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ತವರಿನ ಪ್ರೇಕ್ಷಕರ ಎದುರು ಮನಮೋಹಕ ಬ್ಯಾಟಿಂಗ್‌ ಪ್ರದರ್ಶಿಸಿದ ಅಶ್ವಿನ್ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ 12ನೇ ಅರ್ಧಶತಕ ಪೂರೈಸಿ ಬಳಿಕ ಅದನ್ನು ಶತಕವನ್ನಾಗಿ ಪರಿವರ್ತಿಸಿದರು. ಇದು ಅವರ 5ನೇ ಟೆಸ್ಟ್‌ ಶತಕವಾಗಿದೆ.

ಕಳೆದ ನಾಲ್ಕೂ ಶತಕಗಳನ್ನು ವೆಸ್ಟ್‌ ಇಂಡೀಸ್‌ ವಿರುದ್ಧ ಬಾರಿಸಿದ್ದ ಅಶ್ವಿನ್ ಈಗ ಇಂಗ್ಲೆಂಡ್‌ ಎದುರು ಖಾತೆ ತೆರೆದಿದ್ದಾರೆ. 148 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿ 106 ರನ್‌ ಚಚ್ಚಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಒಂದು ಪಂದ್ಯದಲ್ಲಿ 5+ ವಿಕೆಟ್‌ ಹಾಗೂ 50+ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರವಿಚಂದ್ರನ್‌ ಅಶ್ವಿನ್ ಇದೀಗ ರಿಚರ್ಡ್ ಹ್ಯಾಡ್ಲಿ ಜತೆ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. 6 ಬಾರಿ ಅಶ್ವಿನ್ ಹಾಗೂ ಹ್ಯಾಡ್ಲಿ 5+ ವಿಕೆಟ್‌ ಹಾಗೂ 50+ ರನ್‌ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ ಮಾಜಿ ಆಲ್‌ರೌಂಡರ್ ಇಯಾನ್ ಬಾಥಮ್ ಅಗ್ರಸ್ಥಾನದಲ್ಲಿದ್ದಾರೆ. ಇಯಾನ್ ಬಾಥಮ್ 11 ಬಾರಿ ಈ ಸಾಧನೆ ಮಾಡಿದ್ದಾರೆ.

Edited By : Vijay Kumar
PublicNext

PublicNext

15/02/2021 05:13 pm

Cinque Terre

56.27 K

Cinque Terre

1

ಸಂಬಂಧಿತ ಸುದ್ದಿ