ಚೆನ್ನೈ: ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್ಮನ್ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 7 ರನ್ಗೆ ವಿಕೆಟ್ ಕಳೆದುಕೊಂಡರು. ಭಾರತದ ಎರಡನೇ ಇನಿಂಗ್ಸ್ನ 19ನೇ ಓವರ್ನಲ್ಲಿ ಮೋಯಿನ್ ಅಲಿ ಬೌಲಿಂಗ್ನಲ್ಲಿ ಮುನ್ನುಗ್ಗಿ ಚೆಂಡನ್ನು ಲೆಗ್ಸೈಡ್ ಫ್ಲಿಕ್ ಮಾಡುವ ಯತ್ನದಲ್ಲಿ ರನೌಟ್ ಆಗಿದ್ದಾರೆ. ಶಾರ್ಟ್ಲೆಗ್ನಲ್ಲಿ ನಿಂತಿದ್ದ ಓಲಿ ಪೋಪ್ ಹಾಗೂ ವಿಕೆಟ್ ಕೀಪರ್ ಬೆನ್ ಫೋಕ್ಸ್ ಜೋಡಿ ಚುರುಕಿನ ಕೈಚಳಕದ ಮೂಲಕ ಪೂಜಾರ ಅವರನ್ನು ಪೆವಿಲಿಯನ್ನಿಗಟ್ಟಿದ್ದಾರೆ. ಮುನ್ನುಗ್ಗಿ ಬಾರಿಸಲು ಯತ್ನಿಸಿದ್ದ ಪೂಜಾರ ಕ್ರೀಸ್ಗೆ ಮರಳಲು ಯತ್ನಿಸಿದರಾದರೂ ಬ್ಯಾಟ್ ಕೈ ಜಾರಿದ್ದರಿಂದ ವಿಕೆಟ್ ಕಳೆದುಕೊಂಡರು.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವಾದ ಇಂದು ಭಾರತ ಎಲ್ಲ ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಮೂರು ಓವರ್ಗಳಲ್ಲಿ 6 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ.
PublicNext
15/02/2021 04:08 pm