ಚೆನ್ನೈ: ಟೀಂ ಇಂಡಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಶುಭಾರಂಭ ಮಾಡಿದ್ದು, ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡವು 227 ರನ್‌ಗಳಿಂದ ಸೋಲು ಕಂಡಿದೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಮುಕ್ತಾಯಗೊಂಡ ಮೊದಲನೇ ಟೆಸ್ಟ್‌ನಲ್ಲಿ ಭಾರತ ನೀರಸ ಪ್ರದರ್ಶನದೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಎಂಟು ವರ್ಷಗಳ ಬಳಿಕ ಸೋಲು ಕಂಡಿದೆ. ಇದಲ್ಲದೆ ನಾಲ್ಕು ವರ್ಷಗಳ ನಂತರ ತವರು ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಸೋಲು ಇದಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಈಗ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್ ವಿವರ:
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್: 190.1 ಓವರ್, 578 ರನ್
ಭಾರತದ ಮೊದಲ ಇನ್ನಿಂಗ್ಸ್: 95.5 ಓವರ್, 337 ರನ್
ಇಂಗ್ಲೆಂಡ್‌ನ ದ್ವಿತೀಯ ಇನ್ನಿಂಗ್ಸ್: 46.3 ಓವರ್, 178 ರನ್
ಭಾರತದ ದ್ವಿತೀಯ ಇನ್ನಿಂಗ್ಸ್: 58.1 ಓವರ್, 192 ರನ್
PublicNext
09/02/2021 02:34 pm