ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಲಿನ ಭೀತಿಯಲ್ಲಿ ಭಾರತ: 6 ವಿಕೆಟ್ ನಷ್ಟ

ಚೆನ್ನೈ: ಇಲ್ಲಿನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದೆ. ಅಂತಿಮ ದಿನದಾಟ ಆರಂಭವಾಗಿದ್ದು, ಭಾರತದ ಗೆಲುವಿಗೆ 381 ರನ್​ಗಳ ಅವಶ್ಯಕತೆಯಿತ್ತು. ಆದರೆ, ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ದೊಡ್ಡ ವಿಕೆಟ್ ಕಳೆದುಕೊಂಡಿದೆ. ಒಟ್ಟು 6 ವಿಕೆಟ್ ಪತನಗೊಂಡಿದೆ.

ಈ ಪಂದ್ಯ ಡ್ರಾ ಆದಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೇರಲು ಮುಂದಿನ 3 ಟೆಸ್ಟ್​ ಪೈಕಿ ಎರಡರಲ್ಲಿ ಗೆಲ್ಲಬೇಕಾದದ್ದು ಅಗತ್ಯವಾಗಿದೆ. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ನಿನ್ನೆ ಎರಡನೇ ಇನ್ನಿಂಗ್ಸ್​ನಲ್ಲಿ ಆರ್. ಅಶ್ವಿನ್‌ (61 ರನ್​ಗೆ 6 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿದ ಆಂಗ್ಲರು 178 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಪ್ರಥಮ ಇನಿಂಗ್ಸ್‌ನಲ್ಲಿ 241 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್‌ ತಂಡ, ಭಾರತಕ್ಕೆ ಗೆಲ್ಲಲು 420 ರನ್​ಗಳ ಟಾರ್ಗೆಟ್ ನೀಡಿತು.

Edited By : Nagaraj Tulugeri
PublicNext

PublicNext

09/02/2021 12:23 pm

Cinque Terre

51.44 K

Cinque Terre

1

ಸಂಬಂಧಿತ ಸುದ್ದಿ