ಭಾರತದಲ್ಲಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಇಂಗ್ಲೆಂಡ್ ವಿರುದ್ದದ ಸರಣಿಯೊಂದಿಗೆ ಮತ್ತೆ ಚಾಲನೆ ದೊರೆತಿದೆ. ಅಲ್ಲದೆ 2021 ರಿಂದ 2023ರೊಳಗೆ ಟೀಮ್ ಇಂಡಿಯಾ ಆಡಲಿರುವ ಪ್ರಮುಖ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಈ ವೇಳಾಪಟ್ಟಿಯಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯ ದಿನಾಂಕವನ್ನು ಸೂಚಿಸಲಾಗಿದ್ದು, ಅದರಂತೆ ಐಪಿಎಲ್ ಸೀಸನ್ 14 ಏಪ್ರಿಲ್-ಮೇ ನಡುವೆ ನಡೆಯಲಿದೆ.
ಮುಂದಿನ 3 ವರ್ಷಗಳ ಕಾಲ ಟೀಮ್ ಇಂಡಿಯಾ ನಾನ್ ಸ್ಟಾಪ್ ಕ್ರಿಕೆಟ್ ವೇಳಾ ಪಟ್ಟಿ ಇಲ್ಲಿದೆ ನೋಡಿ…
• 2021ರ ಏಪ್ರಿಲ್-ಮೇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್
• 2021ರ ಜೂನ್-ಜುಲೈನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಶ್ರೀಲಂಕಾ ವಿರುದ್ಧ 3 ಏಕದಿನ, 5 ಟಿ20 ಹಾಗೂ ಏಷ್ಯಾ ಕಪ್.
• 2021ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ 3 ಏಕದಿನ ಪಂದ್ಯಗಳು
• 2021ರ ಜುಲೈ-ಸೆಪ್ಟೆಂಬರ್ ನಡುವೆ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.
• 2021ರ ಅಕ್ಟೋಬರ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ 3 ಏಕದಿನ, 5 ಟಿ20 ಪಂದ್ಯಗಳು ನಡೆಯಲಿದೆ.
• 2021ರ ಅಕ್ಟೋಬರ್-ನವೆಂಬರ್ ನಡುವೆ ಐಸಿಸಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.
• 2021ರ ನವೆಂಬರ್-ಡಿಸೆಂಬರ್ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್, 3 ಟಿ20 ಆಡಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್, 3 ಟಿ20 ಪಂದ್ಯಗಳನ್ನಾಡಲಿದೆ.
• 2022ರ ಜನವರಿಯಿಂದ ಮಾರ್ಚ್ ನಡುವೆ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ. ಹಾಗೆಯೇ ಇದೇ ವೇಳೆ ಶ್ರೀಲಂಕಾ ವಿರುದ್ಧ 3 ಟೆಸ್ಟ್, 3 ಟಿ20 ಆಡಲಿದೆ.
• 2022ರ ಏಪ್ರಿಲ್ ನಿಂದ ಮೇ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಜರುಗಲಿದೆ.
• 2022ರ ಜೂನ್ನಲ್ಲಿ ಯಾವುದೇ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿಲ್ಲ.•
• 2022ರ ಜುಲೈ-ಆಗಸ್ಟ್ ನಡುವೆ ಇಂಗ್ಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ. ಅದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನು ಸಹ ಆಡಲಿದೆ.
• 2022ರ ಸೆಪ್ಟೆಂಬರ್ನಲ್ಲಿ ಏಷ್ಯಾ ಕಪ್ ನಡೆಯಲಿದೆ.
• 2022ರ ಅಕ್ಟೋಬರ್ - ನವೆಂಬರ್ ನಡುವೆ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.
• 2022ರ ನವೆಂಬರ್-ಡಿಸೆಂಬರ್ ವೇಳೆ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, 3 ಟಿ20 ಹಾಗೂ ಶ್ರೀಲಂಕಾ ವಿರುದ್ಧ 5 ಏಕದಿನ ಪಂದ್ಯಗಳನ್ನಾಡಲಿದೆ.
• 2023ರ ಜನವರಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ.
• 2023ರ ಫೆಬ್ರವರಿ-ಮಾರ್ಚ್ ನಡುವೆ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ 4 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ.
PublicNext
08/02/2021 07:19 pm