ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಷ್ಟದಲ್ಲಿ ಟೀಂ ಇಂಡಿಯಾ: ಫಾಲೋ ಆನ್ ಭೀತಿ ಶುರು

ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭಾರತದ 6 ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತ 257 ರನ್ ಗಳಿಸಿದ್ದು 321 ರನ್‌ಗಳ ದೊಡ್ಡ ಹಿನ್ನಡೆಯಲ್ಲಿದೆ.

ಟೀಮ್ ಇಂಡಿಯಾ ಪರವಾಗಿ ಪ್ರಮುಖ ಆಟಗಾರರು ಅಗ್ಗಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆಯಂತಾ ಆಟಗಾರರು ತೀರಾ ನೀರಸ ಪ್ರದರ್ಶನ ನೀಡಿ ಆಘಾತವನ್ನು ನೀಡಿದರು. ಆದರೆ ರಿಷಬ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಶತಕದ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಇಬ್ಬರೂ ತಲಾ ಅರ್ಧ ಶತಕವನ್ನು ದಾಖಲಿಸಿದರಾದರು ಕೂಡ ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಪೂಜಾರ 73 ರನ್ ಗಳಿಸಿ ಔಟಾದರೆ, ಪಂತ್ 91 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 578 ರನ್ ಗಳಿಸಿ ಆಲೌಟ್ ಆಗಿದೆ. 8 ವಿಕೆಟ್ ಕಳೆದುಕೊಂಡಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಇಂದು ತನ್ನ ಅಂತಿಮ ಎರಡು ವಿಕೆಟ್ ಕಳೆದುಕೊಳ್ಳುವ ಮುನ್ನ 23 ರನ್‌ಗಳನ್ನು ಖಾತೆಗೆ ಸೇರಿಸಿಕೊಂಡಿದೆ. ಡಾಮಿನಿಕ್ ಬೆಸ್ ಬೂಮ್ರಾ ಎಲ್‌ಬಿ ಬಲೆಗೆ ಬಿದ್ದರೆ ಜೇಮ್ಸ್ ಆಂಡರ್ಸನ್ ಅಶ್ವಿನ್ ಎಸೆತಕ್ಕೆ ಬೌಲ್ಡ್ ಆಗುವ ಮೂಲಕ ಇನ್ನಿಂಗ್ಸ್ ಅಂತ್ಯಗೊಳಿಸಿದರು.

Edited By : Nagaraj Tulugeri
PublicNext

PublicNext

07/02/2021 08:37 pm

Cinque Terre

83.71 K

Cinque Terre

0