ಕೋಲ್ಕತ್ತಾ: ಭಾರತದ ಟೆನಿಸ್ ದಂತಕಥೆ ಹಾಗೂ ಡೇವಿಸ್ ಕಪ್ ಮಾಜಿ ಕೋಚ್ ಅಖ್ತರ್ ಅಲಿ ಅವರು ನಿಧನರಾಗಿದ್ದಾದೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದ ಅವರ ಆರೋಗ್ಯ ಕ್ಷೀಣವಾಗಿತ್ತು. 1958ರಿಂದ 1964ರ ಮಧ್ಯೆ ಎಂಟು ಡೇವಿಸ್ ಕಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು ಭಾರತ ತಂಡದ ನಾಯಕ ಮತ್ತು ತರಬೇತುದಾರರಾಗಿದ್ದರು. ಅಖ್ತರ್ ಅಗಲಿಕೆಗೆ ಕ್ರೀಡಾ ಕ್ಷೇತ್ರದ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
PublicNext
07/02/2021 07:26 pm