ಚೆನ್ನೈ: ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು ಇಂಗ್ಲೆಂಡ್ ತಂಡವು ಸರ್ವಪತನ ಕಾಣದೇ ಮೂರನೇ ದಿನದ ಆಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ನಾಯಕ ಜೋ ರೂಟ್ 218 ರನ್, ಬೆನ್ ಸ್ಟೋಕ್ಸ್ 82 ರನ್‌ಗಳ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದೆ. 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದೆ. ಈ ಮೂಲಕ ಮೂರನೇ ದಿನವೂ ಬ್ಯಾಟಿಂಗ್ ಮಾಡಲಿದೆ.
ಈ ಪಂದ್ಯದಲ್ಲಿ ವಿಕೆಟ್ ಪಡೆಯಲಾಗದೆ ಪರದಾಡಿದ್ದ ಟೀಂ ಇಂಡಿಯಾ ಬೌಲರ್‌ಗಳು 2ನೇ ದಿನದ ನಾಲ್ಕನೇ ಸೆಷನ್‌ನಲ್ಲಿ 4 ವಿಕೆಟ್ ಪಡೆದರು. ಆದರೆ ಅಷ್ಟು ಹೊತ್ತಿಗಾಗಲೇ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸಿತ್ತು. ಅನುಭವಿ ಬೌಲರ್ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಆರ್ ಅಶ್ವಿನ್ ಮತ್ತು ಶಾಬಾಜ್ ನದೀಂ ತಲಾ 2 ವಿಕೆಟ್ ಪಡೆದರು.
PublicNext
06/02/2021 05:31 pm